HEALTH TIPS

ಸೂರಂಬೈಲು ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ

ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರವೇಶೋತ್ಸವ ವಿಜ್ರಂಭಣೆಯಿಂದ ಜರಗಿತು. ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಸೋಮಶೇಖರ ಜೆ.ಎಸ್. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. 


ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊೈದು ಸೀತಂಗೋಳಿ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಗ್ರಾಮ ಪಂಚಾಯತಿ ಸದಸ್ಯ ಸತೀಶ್ ಪೆರ್ಣೆ ಮುಖ್ಯ ಅತಿಥಿಯಾಗಿದ್ದರು. ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು. ಶಾಲಾ ನೌಕರರ ಸಂಘದ ವತಿಯಿಂದ ಕಲಿಕೋಪಕರಣ ಕಿಟ್ ವಿತರಿಸಲಾಯಿತು. ಎಸ್ ಎಂ ಸಿ ಅಧ್ಯಕ್ಷ ಜಾನಿ ಡಿಸೋಜ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುಜಂಗಾವು, ನಿವೃತ್ತ ಶಿಕ್ಷಕ ಕಿರಣ್ ಕೆ ಮಾತನಾಡಿದರು. ಅಮೃತ, ನಿಖಿತ ಪ್ರತಿಜ್ಞೆ ಬೋಧಿಸಿದರು. ಸೇವಾ ಸಹಕಾರಿ ಬ್ಯಾಂಕ್ ನ ಸಹಾಯಕ ಕಾರ್ಯದರ್ಶಿ ಗೀತ ಮುಜಂಗಾವು ಅವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. 


ಕಾರ್ಯಕ್ರÀಮದ ಮೊದಲು ನೂತನ ವಿದ್ಯಾರ್ಥಿಗಳನ್ನು ಆಕರ್ಷಕ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗಳಿಸಿದ ವಿದ್ಯಾರ್ಥಿಗಳ ವತಿಯಿಂದ ಸಿಹಿತಿಂಡಿ ವಿತರಣೆ ನಡೆಯಿತು. ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಿದ ಸೂರಂಬೈಲು ಜೈಹಿಂದ್ ಕ್ಲಬ್ ಸದಸ್ಯರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು. ಮುಖ್ಯೋಪಾಧ್ಯಾಯಿನಿ ಸುನೀತ ಎ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಶರತ್ ಕುಮಾರ್ ಬೇಳ ವಂದಿಸಿದರು. ಶುಭ, ಗೀತ ಕಾರ್ಯಕ್ರಮ ನಿರ್ವಹಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries