HEALTH TIPS

ಯುದ್ಧ ನಿಲ್ಲಿಸಲು ಇರಾನ್‌ ಸಲ್ಲಿಸಿರುವ ಹೊಸ ಪ್ರಸ್ತಾವನೆಗೆ ಟ್ರಂಪ್ ಅತೃಪ್ತಿ

 ದುಬೈ/ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಇರಾನ್ ನೀಡಿರುವ ಇತ್ತೀಚಿನ ಪ್ರಸ್ತಾವನೆಯ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ಹೊಂದಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆ.28ರಂದು ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ನಡೆಸಿದ್ದವು.


ಇದು ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಕಾರಣವಾಗಿತ್ತು. ಇದು ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ, ಹಣದುಬ್ಬರ ಹಾಗೂ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಟ್ರಂಪ್ ಅಸಮಾಧಾನವು ಶಾಶ್ವತ ಕದನವಿರಾಮದ ಬೆಳವಣಿಗೆಗೆ ಹಿನ್ನಡೆ ಉಂಟುಮಾಡಿದೆ.

ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಹೊರ್ಮುಜ್‌ ಜಲಸಂಧಿ ವಿವಾದವು ಇತ್ಯರ್ಥವಾಗುವವರೆಗೆ ಪರಮಾಣು ಕಾರ್ಯಕ್ರಮದ ಕುರಿತಾದ ಚರ್ಚೆಯನ್ನು ಬದಿಗಿರಿಸಬೇಕು ಎಂದು ಇರಾನ್‌, ಇತ್ತೀಚಿನ ಪ್ರಸ್ತಾವನೆಯಲ್ಲಿ ತಿಳಿಸಿತ್ತು.

ಆದರೆ, ಇರಾನ್‌ನ ಪರಮಾಣು ವಿಷಯವೇ ಮೊದಲ ಆದ್ಯತೆ ಎಂದಿರುವ ಟ್ರಂಪ್, ಇರಾನ್‌ನ ಪ್ರಸ್ತಾವನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊದಲ ಹಂತವಾಗಿ ಅಮೆರಿಕ-ಇಸ್ರೇಲ್ ಯುದ್ಧವನ್ನು ನಿಲ್ಲಿಸಬೇಕು ಮತ್ತು ಅದನ್ನು ಮತ್ತೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂಬ ಖಾತರಿಯನ್ನು ನೀಡಬೇಕು. ನಂತರ, ಸಮುದ್ರ ವ್ಯಾಪಾರದ ಮೇಲೆ ಅಮೆರಿಕ ನೌಕಾಪಡೆ ವಿಧಿಸಿರುವ ದಿಗ್ಬಂಧನ ಮತ್ತು ಹೊರ್ಮುಜ್ ಜಲಸಂಧಿಯ ಭವಿಷ್ಯದ ಬಗ್ಗೆ ನಿರ್ಧಾರವಾಗಬೇಕು. ಆನಂತರ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳು ನಡೆಯಲು ಸಾಧ್ಯ ಎಂದು ಇರಾನ್‌, ಹೊಸ ಪ್ರಸ್ತಾವನೆಯಲ್ಲಿ ತಿಳಿಸಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries