ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಬದಿಯಡ್ಕ ಪಂಚಾಯಿತಿ ಘಟಕದ ವಾರ್ಷಿಕ ಮಹಾಸಭೆ ಬದಿಯಡ್ಕ ನವಜೀವನ ವಿದ್ಯಾಲಯದಲ್ಲಿ ಶುಕ್ರವಾರ ಜರಗಿತು. ಬ್ಲಾಕ್ ಸಮಿತಿ ಅಧ್ಯಕ್ಷ, ನಿವೃತ್ತ ಅಧ್ಯಾಪಕ ಸೂರ್ಯನಾರಾಯಣ ಉದ್ಘಾಟಿಸಿ ಮಾತನಾಡಿ, ಪಿಂಚಣಿದಾರರ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಲಭಿಸುವ ಸವಲತ್ತುಗಳನ್ನು ಪಡೆಯಲು ನಾವೆಲ್ಲ ಒಗ್ಗಟ್ಟಿನಿಂದ ಕಾರ್ಯಪ್ರವೃತ್ತರಾಗಬೇಕು. ಹಿರಿಯರಿಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಗಳಿಗೂ ನಾವು ಕೈಜೋಡಿಸಬೇಕು ಎಂದು ಕರೆಯಿತ್ತರು. ಬದಿಯಡ್ಕ ಘಟಕ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಶ್ರೀಧರ ಭಟ್ ಪೆರ್ಮುಖ ಈಶ್ವರ ಭಟ್ ಮಾತನಾಡಿದರು. ನೂತನವಾಗಿ ಸಂಘಟನೆಗೆ ಸೇರ್ಪಡೆಗೊಂಡ ಸದಸ್ಯರನ್ನು ಶಾಲು ಹೊದೆಸಿ ಸ್ವಾಗತಿಸಲಾಯಿತು. ಮೈರ್ಕಳ ನಾರಾಯಣ ಭಟ್, ಕೇಶವ ಪ್ರಸಾದ ಕುಳಮರ್ವ, ವಿಶಾಲಾಕ್ಷಿ ಕುಳಮರ್ವ, ಜಯಶ್ರೀ ತೊಂಡಮೂಲೆ, ಸುಮಿತ್ರ, ನವೀನಚಂದ್ರ ಮಾನ್ಯ ಉಪಸ್ಥಿತರಿದ್ದರು. ವೆಂಕಟ್ರಾಜ ಚಾಳೆತ್ತಡ್ಕ ಸ್ವಾಗತಿಸಿ, ಗಣೇಶ ಪಟ್ಟಾಜೆ ವಂದಿಸಿದರು.

.jpg)
