ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ 6ನೇ ಚಾತುರ್ಮಾಸ್ಯದ ಅಂಗವಾಗಿ ಜರಗುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪುತ್ತೂರು ಇವರ ಶಿಷ್ಯೆಯರಾದ ಕುಮಾರಿ ಶಮಾ ವಳಕುಂಜ ಹಾಗೂ ಕುಮಾರಿ ಶಾರ್ವಿ ವಳಕುಂಜ ಇವರಿಂದ `ಕೃಷ್ಣಾರ್ಚನಂ' ಭರತನಾಟ್ಯ ಹಾಗೂ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಜರಗಿತು. ಶ್ರೀಕೃಷ್ಣಾಷ್ಟಮಿಯ ವಿಶೇಷ ದಿನದಂದು ನಡೆದ ಈ ನೃತ್ಯ ಕಾರ್ಯಕ್ರಮದಲ್ಲಿ ಸಹೋದರಿಯರು ಶ್ರೀಕೃಷ್ಣನಿಗೆ ಸಂಬಂಧಿಸಿದ ನೃತ್ಯ ಪ್ರಸ್ತುತಿಯನ್ನು ನೀಡಿ ಜನಮನ ಸೆಳೆದರು.

.jpg)
