ಬದಿಯಡ್ಕ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಕಲ್ಲಕಟ್ಟ ಯಂ.ಎ.ಯುಪಿ. ಶಾಲೆಯ ಬುಲ್‍ಬುಲ್ ಮಕ್ಕಳು ಇದೇ ಶಾಲೆಯಲ್ಲಿ 35 ವರ್ಷ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪಿ. ವಿಜಯಲಕ್ಷ್ಮಿ ಅವರಿಗೆ ಗುರುವಂದನೆ ಸಲ್ಲಿಸಿದರು.
ಸನ್ಮಾನವನ್ನು ಸ್ವೀಕರಿಸಿ ಅವರು ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಸಿ, ಗುರುಹಿರಿಯರನ್ನು ಗೌರವಿಸಿ, ಎಲ್ಲರನ್ನೂ ಸಹೋದರ-ಸಹೋದರಿಯರಂತೆ ಕಂಡು, ಉತ್ತಮವಾಗಿ ಕಲಿತು ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ದೇಶಸೇವೆ ಮಾಡಿ ರಾಷ್ಟ್ರದ ಯೋಗ್ಯ ಪ್ರಜೆಗಳಾಗಿ ಎಂದು ಹಾರೈಸಿದರು. ಕಲ್ಲಕಟ್ಟ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಟೀಚರ್ ಹಾಗೂ ಫ್ಲಾಕ್ ಲೀಡರ್ ಗಂಗಾ ಟೀಚರ್ ಉಪಸ್ಥಿತರಿದ್ದರು.

.jpg)
