ಕಾಸರಗೋಡು: ಓಣಂ ಆಚರಣೆಯ ಕಾರ್ಯಕ್ರಮದ ಮಧ್ಯೆ ಪಾಳುಬಾವಿಗೆ ಬಿದ್ದ 15ರ ಹರೆಯದ ಬಾಲಕನನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಪುಲ್ಲಾಂಜಿಪ್ಪಾರ ನಿವಾಸಿ ಸನೂಪ್ (15) ಅಪಾಯಕ್ಕೊಳಗಾದ ಬಾಲಕ. ಗುರುವಾರ ರಾತ್ರಿ 8.45ರ ವೇಳೆ ಚೀಮೇನಿ ಚೆಂಬ್ರಕಾನದಲ್ಲಿ ಘಟನೆ ನಡೆದಿದೆ.
ಓಣಂ ಹಬ್ಬದ ಕಾರ್ಯಕ್ರಮಕ್ಕೆ ಸನೂಪ್ ತನ್ನ ಸ್ನೇಹಿತರೊಂದಿಗೆ ಚೀಮೇನಿ ಚಂಬ್ರಕಾನಕ್ಕೆ ಆಗಮಿಸಿದ್ದು, ಕಾರ್ಯಕ್ರಮ ನಡೆಯುತ್ತಿದ್ದ ಮಧ್ಯೆ ಗೆಳೆಯರೊಂದಿಗೆ ಮೂತ್ರಶಂಕೆಗಿಂದು ಹೋದಾಗ ಆವರಣವಿಲ್ಲದ ಬಾವಿಗೆ ಬಿದ್ದಿದ್ದಾನೆ. ಗೆಳೆಯರು ಬೊಬ್ಬೆ ಹಾಕಿದ ಹಿನ್ನೆಲೆಯಲ್ಲಿ ಅಲ್ಲಿದ್ದವರು ಸ್ಥಳಕ್ಕೆ ತಲುಪಿದರಾದರೂ ಬಾಲಕನನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕದಳ ಸಿಬ್ಬಂದಿ ಧಾವಿಸಿ ಬಾಲಕನನ್ನು ಮೇಲಕ್ಕೆತ್ತಿ ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

