ಕಾಸರಗೋಡು: ಓಣಂ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಟೋದಲ್ಲಿ ಮನೆಗೆ ಹಿಂತಿರುಗುತ್ತಿದ್ದ 14ರ ಹರೆಯದ ಬಾಲಕಿಗೆ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕ ಶಾಜಿ ಎಂಬಾತನನ್ನು ಚೀಮೇನಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಪೆÇೀಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ.
ಚೀಮೇನಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ವೇಳೆ ಆಟೋದಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ, ಆಟೋದಲ್ಲಿ ದೌರ್ಜನ್ಯವೆಸಗಿರುವುದಾಗಿ ದೂರಲಾಗಿದೆ. ಮನೆಗೆ ಹಿಂತಿರುಗಿದ ಬಾಲಕಿ ಅಸೌಖ್ಯಪೀಡಿತಳಾಗಿರುವುದನ್ನು ಗಮನಿಸಿದ ಮನೆಯವರು ವಿಚಾರಿಸಿದಾಗ ಘಟನೆ ಬಗ್ಗೆ ಮಾಹಿತಿ ನೀಡಿದ್ದಳು. ಬಾಲಕಿ ನೀಡಿದ ಮಾಹಿತಿಯನ್ವಯ ಮನೆಯವರು ಪೆÇಲೀಸರಿಗೆ ಮಾಹಿತಿ ನೀಡಿದ್ದರು.

