ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಆನೂರು ಅನಂತ ಕೃಷ್ಣಶರ್ಮ ಫೌಂಡೇಶನ್ ಫಾರ್ ಮ್ಯೂಸಿಕ್ ನಡೆಸಿಕೊಟ್ಟ ಲಯ ಲಾವಣ್ಯ ಕಾರ್ಯಕ್ರಮ ಜನಮನ್ನಣೆಗೆ ಕಾರಣವಾಯಿತು.
ಹನ್ನೆರಡು ಮಂದಿ ಕಲಾವಿದರು 20ಕ್ಕೂ ಮಿಕ್ಕಿ ವಾದ್ಯ ಪರಿಕರಗಳೊಂದಿಗೆ ನಡೆಸಿಕೊಟ್ಟ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ವಿದ್ವಾನ್ ಆನೂರು ಅನಂತ ಕೃಷ್ಣ ಅವರು ಮೃದಂಗವಾದನದೊಂದಿಗೆ ಈ ಕಾರ್ಯಕ್ರಮದ ಸಂಪೂರ್ಣ ನೇತೃತ್ವ ವಹಿಸಿದ್ದರು. ಕೊಳಲು ವಾದನದಲ್ಲಿ ವಿದ್ವಾನ್ ಅಮಿತ್ ನಾಡಿಗ್, ಪಿಟೀಲಿನಲ್ಲಿ ವಿದ್ವಾನ್ ಕೆ. ಜೆ ದಿಲೀಪ್, ಖಂಜರಿ ಯಲ್ಲಿ ಸುನಾದ ಆನೂರು, ಮೋಸಿರ್ಂಗ್ ಚಿದಾನಂದ ಹಾಗೂ ಕಾರ್ತಿಕ್ ಪ್ರಣಮ್, ಪಂಚಮ ಶ್ರುತಿ ಮೃದಂಗ, ಮದ್ದಳೆ ಪ್ರಜ್ವಲ್ ಭಾರದ್ವಾಜ್, ಚೆಂಡೆ,ನಗಾರಿ, ನಾದಪುಂಜದಲ್ಲಿ ಸಾಯಿ ವಂಶಿ, ಡ್ರಮ್ಸ್ ನಲ್ಲಿ ತಿರುಮಲೆ ಗೋಪಿ ಶ್ರವಣ, ತಬಲದಲ್ಲಿ ಪಂಡಿತ್ ಕಿರಣ್ ಗೋಡ್ಕಿಂಡಿ, ಪಕ್ವಾಜ್ದಲ್ಲಿ ಆನೂರು ಪ್ರಬೋದ್ ಶಾಮ್, ಡೋಲಕ್, ಡೋಲ್ಕಿ, ಶ್ರೀ ಖೋಲ್‍ನಲ್ಲಿ ಆನೂರು ವಿನೋದ್ ಶ್ಯಾಮ್ ಸಹಕರಿಸಿದ್ದರು. ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ವಿ. ಮನೋಹರ್ ಸಮರಂಭದಲ್ಲಿ ಉಪಸ್ಥಿತರಿದ್ದು, ಶುಭಹಾರೈಸಿದರು.



