HEALTH TIPS

ಇರಾನ್ ಗೆ ದಿಗ್ಬಂಧನ ಕಾರ್ಯಾಚರಣೆಯ ಮಧ್ಯೆ ಯುಎಸ್ ನೌಕಾಪಡೆಗೆ ಆಘಾತ; ಕಾರ್ಯದರ್ಶಿ ಜಾನ್ ಫೆಲನ್ ವಜಾ

ವಾಷಿಂಗ್ಟನ್: ಇರಾನ್ ವಿರುದ್ಧ ಯುಎಸ್ ನೌಕಾಪಡೆಯ ದಿಗ್ಬಂಧನ ಕಾರ್ಯಾಚರಣೆ ನಡೆಯುತ್ತಿರುವ ಮಹತ್ವದ ಸಂದರ್ಭದಲ್ಲಿ, ನೌಕಾಪಡೆಯ ಕಾರ್ಯದರ್ಶಿ ಜಾನ್ ಫೆಲನ್ ಅವರನ್ನು ಬುಧವಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ. ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಚರ್ಚೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್ ಪ್ರಕಟಣೆ ನೀಡಿದ್ದು, ಫೆಲನ್ ಅವರ ಸೇವೆಗೆ ಧನ್ಯವಾದಗಳನ್ನು ತಿಳಿಸಿ, ಅಂಡರ್ ಸೆಕ್ರೆಟರಿ ಹಂಗ್ ಕಾವೊ ಹಂಗಾಮಿ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಹಡಗುಗಳ ಚಲನವಲನವನ್ನು ನಿಯಂತ್ರಿಸುವಲ್ಲಿ ಯುಎಸ್ ನೌಕಾಪಡೆ ಪ್ರಮುಖ ಪಾತ್ರವಹಿಸುತ್ತಿರುವ ವೇಳೆಯಲ್ಲೇ ಈ ಬದಲಾವಣೆ ನಡೆದಿದೆ. ಈಗಾಗಲೇ ಹಲವು ಹಡಗುಗಳನ್ನು ಹಿಂದಕ್ಕೆ ತಿರುಗಿಸಲಾಗಿದ್ದು, ಕೆಲವು ಹಡಗುಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫೆಲನ್ ಮತ್ತು ಹೆಗ್ಸೆತ್ ನಡುವೆ ಕಳೆದ ಕೆಲವು ತಿಂಗಳುಗಳಿಂದ ಭಿನ್ನಾಭಿಪ್ರಾಯಗಳು ಇದ್ದವು ಎಂದು ತಿಳಿದುಬಂದಿದೆ. ಫೆಲನ್ ಹಡಗು ನಿರ್ಮಾಣ ಸುಧಾರಣೆಗಳನ್ನು ವೇಗವಾಗಿ ಜಾರಿಗೆ ತರದಿರುವುದು ಹಾಗೂ ಟ್ರಂಪ್ ಅವರೊಂದಿಗೆ ನೇರ ಸಂಪರ್ಕ ಹೊಂದಿರುವುದು, ರಕ್ಷಣಾ ಇಲಾಖೆಯೊಳಗಿನ ಅಸಮಾಧಾನಕ್ಕೆ ಕಾರಣವಾಯಿತು ಎಂದು ಮೂಲಗಳು ಹೇಳಿವೆ.

ಹಡಗು ನಿರ್ಮಾಣದ ಪ್ರಗತಿ ಬಗ್ಗೆ ಶ್ವೇತಭವನದ ಸಭೆಯಲ್ಲಿ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿ, ಫೆಲನ್ ಅವರನ್ನು ಬದಲಾಯಿಸುವ ಸೂಚನೆ ನೀಡಿದರು. ನಂತರ ಹೆಗ್ಸೆತ್ ಫೆಲನ್ ಅವರಿಗೆ ರಾಜೀನಾಮೆ ನೀಡುವಂತೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಫೆಲನ್ ಈ ನಿರ್ಧಾರದ ಬಗ್ಗೆ ಆರಂಭದಲ್ಲಿ ಅನುಮಾನ ವ್ಯಕ್ತಪಡಿಸಿ, ಶ್ವೇತಭವನದ ಅಧಿಕಾರಿಗಳನ್ನು ಸಂಪರ್ಕಿಸಿ ಸ್ಪಷ್ಟತೆ ಪಡೆಯಲು ಯತ್ನಿಸಿದ್ದಾರೆ. ಬಳಿಕ ಟ್ರಂಪ್ ಅವರನ್ನು ಭೇಟಿ ಮಾಡಿದ ನಂತರ ವಜಾ ನಿರ್ಧಾರ ಖಚಿತವಾಗಿದೆ ಎಂದು ತಿಳಿದುಬಂದಿದೆ.

ಫೆಲನ್ ಯಾವುದೇ ಮಿಲಿಟರಿ ಹಿನ್ನೆಲೆಯಿಲ್ಲದ ಉದ್ಯಮಿ. 2025ರಲ್ಲಿ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು ಅವರು ಟ್ರಂಪ್ ಪ್ರಚಾರಕ್ಕೆ ದೊಡ್ಡ ಮೊತ್ತದ ಹಣ ಸಂಗ್ರಹಿಸಿದ್ದರು.

ಇದೇ ವೇಳೆ, 2006ರಲ್ಲಿ ಶಿಕ್ಷೆಗೆ ಒಳಗಾದ ಜೆಫ್ರಿ ಎಪ್ಸ್ಟೀನ್ ನ ವಿಮಾನದಲ್ಲಿ ಫೆಲನ್ ಪ್ರಯಾಣಿಸಿದ್ದರೆಂಬ ವಿಷಯ ಹಿಂದಿನ ವರದಿಗಳಲ್ಲಿ ಬೆಳಕಿಗೆ ಬಂದಿತ್ತು. ಆದರೆ ಅದು ಯಾದೃಚ್ಛಿಕ(ಪೂರ್ವ ನಿರ್ಧಾರಿತವಲ್ಲದ) ಘಟನೆ ಎಂದು ಅವರ ಆಪ್ತರು ಸ್ಪಷ್ಟಪಡಿಸಿದ್ದಾರೆ.

ವಜಾಗೊಳಿಸುವಿಕೆಯು ಕ್ರಮವು ವಾಷಿಂಗ್ಟನ್ ಡಿಸಿಯ ಹೊರವಲಯದಲ್ಲಿ ನಡೆದ ನೇವಿ ಲೀಗ್ ವಾರ್ಷಿಕ ಸಮುದ್ರ-ವಾಯು-ಬಾಹ್ಯಾಕಾಶ ಸಮ್ಮೇಳನದ ನಡುವೆಯೇ ಪ್ರಕಟಗೊಂಡಿದೆ. ಫೆಲನ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಫೆಲನ್ ಅವರ ವಜಾ, ಟ್ರಂಪ್ ಆಡಳಿತದಲ್ಲಿ ನೇಮಕಗೊಂಡ ಮಿಲಿಟರಿ ಸೇವಾ ಕಾರ್ಯದರ್ಶಿಗಳಲ್ಲಿ ಮೊದಲ ಪ್ರಮುಖ ಬದಲಾವಣೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries