HEALTH TIPS

ಅನಧಿಕೃತ ವಾಸ್ತವ್ಯ-ಕಾಞಂಗಾಡಿನಲ್ಲಿ ಬಾಂಗ್ಲಾ ನಿವಾಸಿ ಮಹಿಳೆಯ ಬಂಧನ

ಕಾಸರಗೋಡು: ಬಾಂಗ್ಲಾದೇಶದ ಪ್ರಜೆಯಾಗಿರುವ ಮಹಿಳೆಯನ್ನು ಕಾಞಂಗಾಡು ರೈಲ್ವೆ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ. ಬಾಂಗ್ಲಾ ನಿವಾಸಿ ಸಲ್ಮಾ ಕಾತ್ತೂಲ್(30)ಬಂಧಿತೆ. ನ್ನು,ಕಾಞಂಗಾಡಿನ ವ್ಯಕ್ತಿಯೊಬ್ಬ ಹೆಚ್ಚಿನ ವೇತನದ ಆಮಿಷವೊಡ್ಡಿ ಬರಮಾಡಿಕೊಂಡಿರುವುದಾಗಿ ಮಹಿಳೆ ತಿಳಿಸಿದ್ದಾಳೆ.  


ಯುವತಿ ಮಲಪ್ಪುರಂ ಜಿಲ್ಲೆಯ ಹೋಟೆಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕಾಞಂಗಾಡಿನ ವ್ಯಕ್ತಿಯೊಬ್ಬ ಈಕೆಯನ್ನು ಪರಿಚಯಮಾಡಿಕೊಂಡು, ಹೆಚ್ಚಿನ ವೇತನ ಕೊಡಿಸುವ ಭರವಸೆಯೊಂದಿಗೆ ಕಾಞಂಗಾಡಿಗೆ ಕರೆತಂದಿದ್ದಾನೆ.   

ಬಾಂಗ್ಲಾದೇಶದಿಂದ ಕೋಲ್ಕತ್ತಾ ತಲುಪಿದ್ದ ಈಕೆ,  ಅಲ್ಲಿಂದ ನಕಲಿ ಆಧಾರ್ ಕಾರ್ಡು ಮತ್ತು ಪಾನ್ ಕಾರ್ಡು ಮಾಡಿಸಿಕೊಂಡು ಬಳಿಕ ಕೇರಳಕ್ಕಾಗಮಿಸಿದ್ದಳು. ತನಗೆ ಊರಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳಿದ್ದಾರೆಂದು ಈಕೆಪೊಲೀಸರಲ್ಲಿ ತಿಳಿಸಿದ್ದಾಳೆ.  ಕಳೆದ ಎರಡು ವರ್ಷಗಳಿಂದ ಈಕೆ ಮಲಪ್ಪುರದ ಹೋಟೆಲ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು.   

ಮಂಗಳವಾರ ರೈಲಿನಲ್ಲಿ  ಕಾಞಂಗಾಡು ಬಂದಿಳಿದ ಈಕೆಯ ಬಗ್ಗೆ ಸಂಶಯಗೊಂಡು, ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಪೆÇಲೀಸರು ವಿಚಾರಣೆ ನಡೆಸಿದಾಗ ಈಕೆ ಬಾಂಗ್ಲಾ   ಪ್ರಜೆ ಎಂಬುದು ಮನದಟ್ಟಾಗಿದ್ದು, ತಕ್ಷಣ ಈಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು.  ಬಂಧಿತಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಾಂಗ್ಲಾದಿಂದ ಪಶ್ಚಿಮ ಬಂಗಾಳಕ್ಕೆ ಆಗಮಿಸಿ, ಅಲ್ಲಿಂದ ಕಾರ್ಮಿಕರ ಸೋಗಿನಲ್ಲಿ ನೇರ ಕೇರಳಕ್ಕೆ ತಲುಪುತ್ತಿರುವ ಬಾಂಗ್ಲಾ ಪ್ರಜೆಗಳು ರಾಜ್ಯದ ನಾನಾ ಕಡೆ ಇಂದಿಗೂ ವಾಸಿಸುತ್ತಿದ್ದಾರೆ.

ಈ ಹಿಂದೆಯೂ ಕಾಞಂಗಾಡಿನಿಂದ ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಭಾರತೀಯ ಕಾರ್ಮಿಕರ ನೆಪದಲ್ಲಿ ಕೇರಳದಲ್ಲಿ ಬಾಂಗ್ಲಾ ಪ್ರಜೆಗಳು ನೆಲೆಸಿದ್ದಾರೆಯೇ ಎಂದು ತನಿಖೆ ನಡೆಸಲಾಗುವುದೆಂದು ಪೆÇಲೀಸರು ತಿಳಿಸಿದ್ದಾರೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries