HEALTH TIPS

ವಾಲ್ಪರೈನಲ್ಲಿ ನಡೆದ ಭೀಕರ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ ಕಚೇರಿ

ಪಾಲಕ್ಕಾಡ್/ನವದೆಹಲಿ: ವಾಲ್ಪಾರೈನಿಂದ ಪೊಳ್ಳಾಚಿಗೆ ಬರುತ್ತಿದ್ದಾಗ 13 ನೇ ಹೇರ್ ಪಿನ್ ತಿರುವಿನಲ್ಲಿ ವಾಹನ ಪಲ್ಟಿಯಾಗಿ ಮಲಪ್ಪುರಂನ ಶಾಲೆಯೊಂದರ ಏಳು ಮಂದಿ ಶಿಕ್ಷಕಿಯರು ಹಾಗೂ ಒಬ್ಬರು ಶಿಕ್ಷಕ ಮತ್ತು ಒಬ್ಬ ವಿದ್ಯಾರ್ಥಿಯ ದಾರುಣ ಅಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ದುಃಖಕರ ಘಟನೆ ಎಂದಿರುವ ಪ್ರಧಾನಿ ಕಚೇರಿ ಸಂತಾಪ ಸೂಚಿಸಿತು. ಮೃತರ ಕುಟುಂಬಗಳ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ಪೋಸ್ಟ್‍ನಲ್ಲಿ ತಿಳಿಸಲಾಗಿದೆ. 


ಏಳು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸಾವನ್ನಪ್ಪಿದ್ದಾರೆ. ವಾಲ್ಪಾರೈನಿಂದ ಪೊಳ್ಳಾಚಿಗೆ ಬರುತ್ತಿದ್ದಾಗ 13 ನೇ ಹೇರ್ ಪಿನ್ ತಿರುವಿನಲ್ಲಿ ವಾಹನ ಪಲ್ಟಿಯಾಗಿ ಸ್ಕಿಡ್ ಆಗಿ 9 ನೇ ತಿರುವಿನಲ್ಲಿ ಬಿದ್ದ ಪರಿಣಾಮ ಈ ಅಪಘಾತ ಸಂಭವಿಸಿದೆ. ನಿನ್ನೆ ಸಂಜೆ 5.15 ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಟೆಂಪೆÇೀ ಟ್ರಾವೆಲರ್‍ನಲ್ಲಿ ಚಾಲಕ ಸೇರಿದಂತೆ 13 ಜನರಿದ್ದರು. ಮೃತರನ್ನು ಅಜಿತಾ (54), ರಮ್ಲಾ (52), ಸುಹ್ರಾ (43), ಆಶಾ (41), ಮಜೀದ್ (43), ಸಜಿತಾ (45), ಶಕೀಲಾ (37), ರುಕಿಯಾ (39) ಮತ್ತು ಹಿಶಾಮ್ (12) ಎಂದು ಗುರುತಿಸಲಾಗಿದೆ. ಗಾಯಗೊಂಡ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.

8 ಜನರು ಸ್ಥಳದಲ್ಲೇ ಸಾವನ್ನಪ್ಪಿದರು. ಪೊಳ್ಳ್ಲಾಚಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಒಬ್ಬರು ಸಾವನ್ನಪ್ಪಿದರು. ಇತರ 4 ಜನರಲ್ಲಿ 3 ಜನರನ್ನು ಪೊಳ್ಳಾಚಿ ಸರ್ಕಾರಿ ಆಸ್ಪತ್ರೆಯಿಂದ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries