ಕಾಸರಗೋಡು: ಬಿಜೆಪಿ ಕಾರ್ಯಕರ್ತನನ್ನು ಹಾದಿಮಧ್ಯೆ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಲ್ಲದೆ, ಬಿಯರ್ ಬಾಟಲಿಯಿಂದ ಹೊಡೆದು ಬೈಕ್‍ಗೆ ಹಾನಿ ಉಂಟುಮಾಡಿರುವ ಬಗ್ಗೆ ಬೇಕಲ ಠಾಣೆ ಪೊಲೀಸರು ಮುಕ್ಕೋಡ್ ನಿವಾಸಿ ಅಬ್ದುಲ್ ರಹ್ಮಾನ್, ವಾಜಿದ್, ಮೊಯ್ದು, ರಫೀಕ್ ಸೇರಿದಂತೆ ಹತ್ತು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ತಂಡ ನಡೆಸಿದ ಹಲ್ಲೆಯಿಂದ ಪೂಚಕ್ಯಾಡ್ ಪುದಿಯಪುರ ನಿವಾಸಿ ಪಿ. ಹರೀಶ್ ಕುಮಾರ್ (36)ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ತಂಡ ಬಿಯರ್ ಬಾಟಲಿಯಿಂದ ಹೊಡೆದು ಬೈಕ್‍ಗೆ ಹಾನಿ ಉಂಟುಮಾಡಿರುವುದಾಗಿಯೂ ದೂರಲಾಗಿದೆ. ತಂಡ ನಡೆಸಿದ ದಾಂಧಲೆಯಿಂದ ಸಮೀಪದ ಬಸ್ ವೈಟಿಂಗ್ ಶೆಡ್ ಹಾಗೂ ಆಸುಪಾಸು ನಿಲ್ಲಿಸಿದ್ದ ಮೂರು ವಾಹನಗಳಿಗೂ ಹಾನಿಯುಂಟಾಗಿದ್ದು, ಇದರಿಂದ 80,000 ರೂಪಾಯಿ ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ. ಸೋಮವಾರ ಸಂಜೆ ಹರೀಶ್‍ಕುಮಾರ್ ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಪೂಚಕ್ಯಾಡ್‍ನಲ್ಲಿ ತಂಡ ತಡೆದು ಹಲ್ಲೆಗೈದಿತ್ತು.
ವಿಜಯೋತ್ಸವ ಮೆರವಣಿಗೆ ವೇಳೆ ಸಿಪಿಎಂ ಕಚೇರಿಗೆ ಹಾನಿ:
ವಿಧಾನಸಭಾ ಚುನಾವಣೆಯ ವಿಜಯೋತ್ಸವ ಮೆರವಣಿಗೆ ವೇಳೆ ಬೇಕಲ ಪೆÇಲೀಸ್ ಠಾಣೆ ವ್ಯಾಪ್ತಿಯ ಉದುಮ ನಾಲಾಂವಾದುಕ್ಕಲ್ ಎಂಬಲ್ಲಿ ಸಿಪಿಎಂ ಕಚೇರಿಗೆ ಹಾನಿಗೈದಿರುವ ಬಗ್ಗೆ ಐಕ್ಯರಂಗ ಕಾರ್ಯಕರ್ತರಾದ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

