HEALTH TIPS

ಬೇರೆ ದೇಶಗಳಿಗಿಂತ ಭಾರತದಲ್ಲಿ ನಮಗೆ ಹೆಚ್ಚು ಅನುಯಾಯಿಗಳಿದ್ದಾರೆ: ನೆತನ್ಯಾಹು

 ನವದೆಹಲಿ: 'ಬೇರೆಲ್ಲಾ ದೇಶಗಳಿಗಿಂತ ಭಾರತದಲ್ಲಿಯೇ ನಮಗೆ ಹೆಚ್ಚಿನ ಅನುಯಾಯಿಗಳಿದ್ದಾರೆ. ವಿಶ್ವದ ಬಹುತೇಕ ಭಾಗಗಳಲ್ಲಿ ನಮ್ಮ ಮಾನ್ಯತೆಯನ್ನು ಪ್ರಶ್ನಿಸುವ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆ ಸಮಸ್ಯೆ ಭಾರತದಲ್ಲಿಲ್ಲ' ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. 


ಗುರುವಾರ ವೆಸ್ಟ್ ಬ್ಯಾಂಕ್‌ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, 'ಭಾರತದೊಂದಿಗೆ ಇಸ್ರೇಲ್‌ ಅನನ್ಯ ಸಂಬಂಧವನ್ನು ಹೊಂದಿದ್ದು, ಅಲ್ಲಿ ನಮಗೆ ಹುಚ್ಚು ಬೆಂಬಲವಿದೆ' ಎಂದಿದ್ದಾರೆ.

ಅಮೆರಿಕದಲ್ಲಿ ತಮ್ಮ ಜನಪ್ರಿಯತೆ ಕುಸಿದಿರುವ ಬಗ್ಗೆ ಮಾತನಾಡಿದ ನೆತನ್ಯಾಹು, ಇದಕ್ಕೆ ಪಾಕಿಸ್ತಾನವನ್ನು ದೂಷಿಸಿದ್ದಾರೆ.

'ಅಮೆರಿಕದ ಜನರಲ್ಲಿ ಇಸ್ರೇಲ್ ವಿರೋಧಿ ಭಾವನೆಯನ್ನು ಉತ್ತೇಜಿಸಲು ಪಾಕಿಸ್ತಾನವು ಸಾಮಾಜಿಕ ಮಾಧ್ಯಮದ ಬಾಟ್ ಫಾರ್ಮ್‌ಗಳನ್ನು ಬಳಸುತ್ತಿದೆ' ಎಂದು ಆರೋಪಿಸಿದ್ದಾರೆ.

'ನಾನು ಇಸ್ರೇಲ್ ಅನ್ನು ಬೆಂಬಲಿಸುತ್ತಿದ್ದ ಅಪ್ಪಟ ಟೆಕ್ಸಾಸ್ ನಿವಾಸಿ. ಆದರೆ, ಈಗ ನನಗೆ ಅವರನ್ನು ಸಹಿಸಲು ಸಾಧ್ಯವಾಗುತ್ತಿಲ್ಲ' ಎಂಬಂತ ಪೋಸ್ಟ್‌ಗಳನ್ನು ಹರಿಯಬಿಡುತ್ತಾರೆ. ಆದರೆ, ಆ ಪೋಸ್ಟ್‌ಗಳ ಮೂಲವನ್ನು ಪರಿಶೀಲಿಸಿದಾಗ, ಪೋಸ್ಟ್‌ ಮಾಡಿದವನು ಪಾಕಿಸ್ತಾನದ ಬೇಸ್‌ಮೆಂಟ್‌ನಲ್ಲಿ ಕುಳಿತಿರುತ್ತಾನೆ' ಎಂದಿದ್ದಾರೆ.

ಏಪ್ರಿಲ್‌ನಲ್ಲಿ ಬಿಡುಗಡೆಯಾದ ಪ್ಯೂ ರಿಸರ್ಚ್ ಸೆಂಟರ್ ಸಮೀಕ್ಷೆಯ ಪ್ರಕಾರ, ಶೇ 60 ರಷ್ಟು ವಯಸ್ಕ ಅಮೆರಿಕನ್ನರು ಇಸ್ರೇಲ್ ಬಗ್ಗೆ ಪ್ರತಿಕೂಲ ಅಭಿಪ್ರಾಯ ಹೊಂದಿದ್ದಾರೆ. ಇದು ಕಳೆದ ವರ್ಷ ಶೇ 53 ರಷ್ಟಿತ್ತು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries