ಕಾಸರಗೋಡು: ವರ್ಕಾಡಿ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಇಗರ್ಜಿ ಧರ್ಮಗುರುಗಳಾಗಿ ಕಾಸರಗೋಡಿನ, ಕನ್ನಡ, ತುಳು ಸಂಘಟನಾತ್ಮಕ ಕೆಲಸ ಕಾರ್ಯಗಳಲ್ಲಿ, ಸಾಹಿತ್ಯ ಕಲಾ ಪೆÇ್ರೀತ್ಸಾಹಕರಾಗಿದ್ದ ಅತೀ ವಂದನೀಯ ಬಾಸಿಲ್ ವಾಸ್ ಅವರು ಸ್ಥಳಾಂತರಗೊಂಡು ತೆರಳುತ್ತಿರುವ ಸಂದರ್ಭದಲ್ಲಿ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಕಾಸರಗೋಡು ಸಿಟಿ ಟವರ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕೆಯೂಡಬ್ಲ್ಯೂಜೆ ರಾಜ್ಯ ಸಮಿತಿ ಸದಸ್ಯ ರಾಧಾಕೃಷ್ಣ ಉಳಿಯತ್ತಡ್ಕ, ಗಮಕ ಪರಿಷತ್ ಕೇರಳ ಘಟಕ ಅಧ್ಯಕ್ಷ ಶಂಕರ ನಾರಾಯಣ ಭಟ್, ಕನ್ನಡ ಹೋರಾಟಗಾರ ಗಣೇಶ್ ಪ್ರಸಾದ್ ಪಾಣೂರು ಹಾಗೂ ಪತ್ರಕರ್ತರು ಭಾಗವಹಿಸಿದ್ದರು. ಗಡಿನಾಡು ಕಾಸರಗೋಡಿನ ಕನ್ನಡ ಮಾಧ್ಯಮ ಪತ್ರಕರ್ತರ ವತಿಯಿಂದ ಫಾದರ್ ಬಾಸಿಲ್ ವಾಸ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಹಿಂದೆ ಬೇಳ ಶೋಕಮಾತ ಇಗರ್ಜಿ, ದ.ಕ ಜಿಲ್ಲೆಯ ವಿವಿಧ ಇಗರ್ಜಿಗಳಲ್ಲಿ ಸೇವೆ ಸಲ್ಲಿಸಿ ಪ್ರಸಕ್ತ ವರ್ಕಾಡಿ ಇಗರ್ಜಿಯಲ್ಲೂ ಸೇವೆ ಸಲ್ಲಿಸಿದ್ದ ಇವರು ಮಂಗಳೂರಿನ ಬೋಂದೆಲ್ ಇಗರ್ಜಿ ಧರ್ಮಗುರುಗಳಾಗಿ ಸೇವೆ ಮುಂದುವರಿಸಲಿದ್ದಾರೆ.



