ಬದಿಯಡ್ಕ: ಕೊಲ್ಲಂಗಾನ ಅನಂತಶ್ರೀಯ 9ನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸೋಮವಾರ ನಡೆಯಿತು. ಈ ಹಿನ್ನೆಲೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ರಾಷ್ಟ್ರೀಯ ಮಹಿಳಾ ಚಳುವಳಿ ನೇತಾರೆ ವಿಜಯ ನಾಯರ್ ಮಂಗಳೂರು ಉದ್ಘಾಟಿಸಿದರು. ಕಣ್ಣೂರು ವಿ.ವಿ.ಕನ್ನಡ ಭಾಷಾ ಅಧ್ಯಯನಾಂಗ ನಿರ್ದೇಶಕ ಡಾ.ಪಿ.ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೋರ್ಪರೇಟ್ ತರಬೇತುದಾರ ಎಂ.ಪಿ.ನಂಬ್ಯಾರ್, ಪುರೋಹಿತ ಸುರೇಶ ಶಿತ್ತಿಲ್ಲಾಯ, ಅರಿಬೈಲು ಗೋಪಾಲ ಶೆಟ್ಟಿ, ಶ್ರೀಧರ ಶೆಟ್ಟಿ ಮುಟ್ಟಂ ಉಪಸ್ಥಿತರಿದ್ದು ಶುಭಹಾರೈಸಿದರು.
ಈ ಸಂದರ್ಭ ವಿವಿಧ ವಲಯಗಳ ಸಾಧಕರಾದ ಡಾ.ಟಿ.ಪಿ.ಆರ್.ನಂಬೂದಿರಿ, ವಿದ್ವಾನ್.ಯೋಗೀಶ ಶರ್ಮಾ ಬಳ್ಳಪದವು, ಹಿರಿಯ ಗುತ್ತಿಗೆದಾರ ವಾಸುದೇವ ಹೊಳ್ಳ ಮಧೂರು, ಕೀರಿಕ್ಕಾಡು ಅಜ್ಜಿಮೂಲೆ ಕೃಷ್ಣ ಭಟ್, ಪಿ.ಜಿ.ಚಂದ್ರಹಾಸ ರೈ ಪೆರಡಾಲ, ಅಚ್ಚುತ ಮಾಸ್ತರ್ ಅಗಲ್ಪಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ.ಯತೀಶ್ ಕುಮಾರ್ ರೈ ಗಾಡಿಗುಡ್ಡೆ, ಚನಿಯಪ್ಪ ನಾಯ್ಕ, ಸುಜ್ಞಾನಿ ಶಾನುಭೋಗ್, ಜಯರಾಮ ಪಾಟಾಳಿ ಪಡುಮಲೆ ಅವರನ್ನು ಅಭಿನಂದಿಸಲಾಯಿತು.
ಪ್ರೊ.ಎ.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಶ್ವಿನಿ ಕೋಡಿಬೈಲು ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು.

.jpg)
.jpg)
