HEALTH TIPS

ಹೆರಿಗೆ ವಾರ್ಡ್‌ನಲ್ಲೇ ವಿಶ್ವದಾಖಲೆ: ಒಂದೇ ಆಸ್ಪತ್ರೆಯ ಎಲ್ಲಾ 17 ನರ್ಸ್‌ಗಳು ಏಕಕಾಲದಲ್ಲಿ ಪ್ರೆಗ್ನೆಂಟ್...!

ವಾಶಿಂಗ್ಟನ್: ಅಮೆರಿಕದ ಒಹಿಯೋ ರಾಜ್ಯದ ಡೇಟನ್‌ನಲ್ಲಿರುವ 'ಮಿಯಾಮಿ ವ್ಯಾಲಿ ಆಸ್ಪತ್ರೆ' ವಿಶಿಷ್ಟ ವಿಶ್ವದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ. ಈ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರ ಆರೈಕೆ ಮಾಡುವ ಎಲ್ಲಾ 17 ಮಂದಿ ನರ್ಸ್‌ಗಳು ಏಕಕಾಲದಲ್ಲಿ ಗರ್ಭಧರಿಸಿದ್ದು , ಶೀಘ್ರದಲ್ಲೇ ಇವರು ಕೂಡ ತಾಯಂದಿರಾಗಲು ಸಜ್ಜಾಗುತ್ತಿದ್ದಾರೆ.

ಇಡೀ ಹೆರಿಗೆ ವಿಭಾಗದ ಸಿಬ್ಬಂದಿಯೇ ಒಟ್ಟಿಗೆ ತಾಯ್ತನದ ಸಂಭ್ರಮದಲ್ಲಿರುವುದು ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಅಪರೂಪದ ಸುದ್ದಿ ಸಖತ್ ವೈರಲ್ ಆಗುತ್ತಿದೆ.
ಈ ಹಿಂದೆ 2019 ರಲ್ಲಿ ಇದೇ ಆಸ್ಪತ್ರೆಯ 11 ಮಂದಿ ನರ್ಸ್‌ಗಳು ಏಕಕಾಲದಲ್ಲಿ ಗರ್ಭಧರಿಸಿ ದಾಖಲೆ ಬರೆದಿದ್ದರು. ಆದರೆ, ಪ್ರಸ್ತುತ ಆಸ್ಪತ್ರೆಯ ಬರೋಬ್ಬರಿ 17 ಮಂದಿ ನರ್ಸ್‌ಗಳು ಒಟ್ಟಿಗೆ ಗರ್ಭಿಣಿಯರಾಗುವ ಮೂಲಕ ಆ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಸದ್ಯ ಈ ಎಲ್ಲಾ ಮಹಿಳಾ ಸಿಬ್ಬಂದಿಗಳು 12 ರಿಂದ 35 ವಾರಗಳ ಗರ್ಭಾವಸ್ಥೆಯಲ್ಲಿದ್ದು, ಇವರಲ್ಲಿ ಕೆಲವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರೆ, ಇನ್ನು ಕೆಲವರು ಎರಡನೇ ಮಗುವಿಗೆ ಜನ್ಮ ನೀಡಲು ಸಜ್ಜಾಗುತ್ತಿದ್ದಾರೆ.

ಇದೇ ಸಮಯದಲ್ಲಿ, ಇಷ್ಟೊಂದು ದೊಡ್ಡ ಸಂಖ್ಯೆಯ ಹೆರಿಗೆ ವಿಭಾಗದ ನರ್ಸ್‌ಗಳು ಏಕಕಾಲದಲ್ಲಿ ಹೆರಿಗೆ ರಜೆಯ ಮೇಲೆ ತೆರಳುವುದರಿಂದ ಆಸ್ಪತ್ರೆಯ ದೈನಂದಿನ ಕಾರ್ಯಕಲಾಪಗಳಿಗೆ ಅಥವಾ ರೋಗಿಗಳ ಆರೈಕೆಗೆ ಭಾರಿ ಅಡಚಣೆ ಉಂಟಾಗಬಹುದೇ? ಎಂಬ ತೀವ್ರ ಕುತೂಹಲ ಹಾಗೂ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಇಡೀ ವಾರ್ಡ್‌ನ ಪ್ರಮುಖ ಸಿಬ್ಬಂದಿಯೇ ಒಟ್ಟಿಗೆ ರಜೆ ಪಡೆದರೆ ಆಸ್ಪತ್ರೆಯು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದೆ ಎಂಬ ಚರ್ಚೆಗಳು ಶುರುವಾಗಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries