ತಿರುವನಂತಪುರಂ: ಕೆ.ಎಸ್.ಆರ್.ಟಿ.ಸಿ. ಸಾಮಾನ್ಯ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಪ್ರಾರಂಭವಾಗುತ್ತಿದ್ದಂತೆ ಪುರುಷರ ಸಂಘಟನೆಯೊಂದು ಪ್ರತಿಭಟನೆಗೆ ಮುಂದಾಗಿದೆ.
ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ 'ಆಲ್ ಕೇರಳ ಮೆನ್ಸ್ ಅಸೋಸಿಯೇಷನ್' ಸಾರ್ವಜನಿಕ ಪ್ರತಿಭಟನೆ ನಡೆಸುತ್ತಿದೆ.
ಉಚಿತ ಪ್ರಯಾಣ ಜಾರಿಗೆ ಬರುವ ಜೂನ್ 15 ರಂದು ತಿರುವನಂತಪುರಂ ಸೆಕ್ರಟರಿಯೇಟ್ ಎದುರು ಪ್ರತಿಭಟನೆ ನಡೆಸುವುದಾಗಿ ಮತ್ತು ರಾಜ್ಯದಾದ್ಯಂತ ಬಸ್ಗಳನ್ನು ತಡೆಯುವುದಾಗಿ ಸಂಘಟನೆ ತನ್ನ ಅಧಿಕೃತ ಫೇಸ್ಬುಕ್ ಪುಟದ ಮೂಲಕ ಎಚ್ಚರಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಅಧಿಕೃತ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿರುವ ವೀಡಿಯೊ ದೃಶ್ಯಾವಳಿಯಲ್ಲಿ, ಸರ್ಕಾರ ಮತ್ತು ಸಾರಿಗೆ ಇಲಾಖೆಯ ವಿರುದ್ಧ ಬಲವಾದ ಸವಾಲುಗಳನ್ನು ಎತ್ತಲಾಗಿದೆ. ಜೂನ್ 15 ರಿಂದ ತಮ್ಮ ಸಂಘಟನೆಯಲ್ಲಿರುವ ಪುರುಷರು ಯಾವುದೇ ಟಿಕೆಟ್ ತೆಗೆದುಕೊಳ್ಳದೆ ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲಿದ್ದಾರೆ ಮತ್ತು ಕಾನೂನು ಪ್ರತಿಭಟನೆ ನಡೆಸಲಿದ್ದಾರೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ.
ಈ ಆಧುನಿಕ ಸಮಾಜದಲ್ಲಿ, ಒಬ್ಬ ಪುರುಷನಾದ ಮಾತ್ರಕ್ಕೆ ನ್ಯಾಯ ಅಥವಾ ಸಮಾನತೆ ಲಭಿಸುವುದಿಲ್ಲ ಎಂದು ಅಜಿತ್ ಕುಮಾರ್ ಆರೋಪಿಸಿದ್ದಾರೆ.
ರಾಜ್ಯದ ಅಧಿಕೃತ ಪಡಿತರ ಚೀಟಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ಮಹಿಳೆಯರಿಗೆ ಮಾತ್ರ ಅಂತಹ ಉಚಿತ ಪ್ರಯಾಣ ಸೌಲಭ್ಯಗಳನ್ನು ಒದಗಿಸುವುದರಲ್ಲಿ ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅಜಿತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ಯಾವುದೇ ಮಾನದಂಡಗಳಿಲ್ಲದೆ, ಅತ್ಯಂತ ಶ್ರೀಮಂತ ಉನ್ನತ ಹುದ್ದೆಯ ಅಧಿಕಾರಿಗಳು ಮತ್ತು ಮಾರುಕಟ್ಟೆಯಲ್ಲಿ ಲಕ್ಷಗಟ್ಟಲೆ ಸಂಪಾದಿಸುವ ಮಹಿಳೆಯರಿಗೆ ಸಾರ್ವಜನಿಕ ತೆರಿಗೆ ಹಣವನ್ನು ಬಳಸಿಕೊಂಡು ಕೆಎಸ್ಆರ್ಟಿಸಿಯಲ್ಲಿ ಸಂಪೂರ್ಣವಾಗಿ ಉಚಿತ ಪ್ರಯಾಣವನ್ನು ಏಕೆ ಒದಗಿಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಉಚಿತ ಯೋಜನೆಗಳು ತಮ್ಮ ಮತಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳಲು ರಾಜಕೀಯ ಗಿಮಿಕ್ ಎಂದು ಮತ್ತು ಜೂನ್ 15 ರಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನು ಆಯೋಜಿಸುವುದಾಗಿ ಸಂಘಟನೆ ಘೋಷಿಸಿರುವುದರಿಂದ, ಮುಂಬರುವ ದಿನಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೆÇೀಗಳು ಮತ್ತು ಗಡಿಗಳು ಭಾರೀ ಪೋಲೀಸ್ ಕಣ್ಗಾವಲಿನಲ್ಲಿರುವ ನಿರೀಕ್ಷೆಯಿದೆ.

