HEALTH TIPS

ಭಾರತಕ್ಕೆ 'ಎಸ್‌ಯು-57 ' ಯುದ್ಧ ವಿಮಾನ ಪೂರೈಕೆಯ ಕೊಡುಗೆ ನೀಡಿದ ಪುಟಿನ್

 ಮಾಸ್ಕೊ: ರಶ್ಯದ ಅತ್ಯಾಧುನಿಕ ಹಾಗೂ ಐದನೇ ತಲೆಮಾರಿನ ಸ್ಟೀಲ್ತ್ ಫೈಟರ್ ಯುದ್ಧವಿಮಾನ ಸುಖೊಯ್ ಎಸ್‌ಯು-57 ಅನ್ನು ಪೂರೈಕೆ ಮಾಡುವ ಕೊಡುಗೆಯನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರು ಭಾರತಕ್ಕೆ ನೀಡಿದ್ದಾರೆ ಹಾಗೂ ಈ ಯುದ್ಧವಿಮಾನವನ್ನು ಭಾರತದಲ್ಲಿ ಜಂಟಿಯಾಗಿ ಉತ್ಪಾದಿಸುವ ಪ್ರಸ್ತಾವನೆಯನ್ನು ಕೂಡಾ ಅವರು ಮುಂದಿಟ್ಟಿದ್ದಾರೆ.


ಜಾಗತಿಕ ಮಟ್ಟದ ಪ್ರಮುಖ ಸುದ್ದಿಸಂಸ್ಥೆಗಳ ವರಿಷ್ಠರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪುಟಿನ್ ಅವರು, ಭಾರತ-ರಶ್ಯ ರಕ್ಷಣೆ ಹಾಗೂ ಸೇನಾ ಬಾಂಧವ್ಯಗಳ ವಿವಿಧ ಅಂಶಗಳನ್ನು ವಿವರಿಸಿದರು ಹಾಗೂ ಎಸ್-57 ವಿಮಾನ ತಯಾರಿಕೆಯ ಜಂಟಿ ಯೋಜನೆಯಲ್ಲಿ ಒಳಗೊಳ್ಳಲು ಮಾಸ್ಕೋ ಆಸಕ್ತವಾಗಿದೆ ಎಂದರು.

''ಐದನೇ ತಲೆಮಾರಿನ ಯುದ್ಧವಿಮಾನ ಎಸ್‌ಯು-57 ಅನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವಂತೆ ಭಾರತದ ನಮ್ಮ ಗೆಳೆಯರನ್ನು ಆಹ್ವಾನಿಸಿದ್ದೇವೆ. ಇದು ಈಗಿನದರಲ್ಲೇ ಅತ್ಯುತ್ತಮವಾದುದಾಗಿದೆ. ಆದರೆ ನಮ್ಮ ಭಾರತೀಯ ಗೆಳೆಯರು, ಸರಿ, ನೋಡೋಣವೆಂದು ಹೇಳಿದ್ದಾರೆ'' ಎಂಬುದಾಗಿ ಪುಟಿನ್ ತಿಳಿಸಿದ್ದಾರೆ.

''ತಾತ್ವಿಕವಾಗಿ ಎಸ್‌ಯು-57 ಯುದ್ಧವಿಮಾನವು ರಶ್ಯ ಹಾಗೂ ಭಾರತದ ಜಂಟಿ ತಯಾರಿಕೆಯಾಗಬಹುದಾಗಿದೆ. ಯಾವುದೇ ನಿರ್ಬಂಧಗಳಿಲ್ಲದೆ ಅದನ್ನು ತಯಾರಿಸಲು ಅಥವಾ ಅಭಿವೃದ್ದಿಪಡಿಸುವುದಕ್ಕಾಗಿ ಭಾರತದೊಂದಿಗೆ ಶ್ರಮಿಸಲು ನಾವು ಸಿದ್ಧರಾಗಿದ್ದೇವೆ'' ಎಂದು ಪುಟಿನ್ ತಿಳಿಸಿದರು.

ರಶ್ಯದ ಈ ಕೊಡುಗೆಯನ್ನು ಭಾರತವು ಸಂಪೂರ್ಣವಾಗಿ ನಿರಾಕರಿಸಿಲ್ಲ. ಈ ವಿಚಾರವಾಗಿ ಸರಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆಯು ಸಂಭಾವ್ಯ ಸಹಯೋಗದ ಹಿನ್ನೆಲೆಯಲ್ಲಿ ಎಸ್‌ಯು-57ನ ತಯಾರಕ ಸಂಸ್ಥೆ 'ಸುಖೋಯ್ ಡಿಸೈನ್ ಬ್ಯುರೋ' ಜೊತೆ ಸಂಪರ್ಕದಲ್ಲಿರುವ ಬಗ್ಗೆ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries