HEALTH TIPS

ನಿಮ್ಮ ಬಾತ್‌ರೂಮ್‌ ಫ್ರೆಶ್ ಆಗಿಡುವ 5 ಗಿಡಗಳು; ಕೆಟ್ಟ ವಾಸನೆ ದೂರ ಮಾಡುವ ಪ್ಲಾಂಟ್ಸ್

ಬಾತ್‌ರೂಮ್ ಅಲಂಕಾರ ಮತ್ತು ಗಾಳಿ ಶುದ್ಧೀಕರಿಸುವ ಗಿಡಗಳು: ಬಾತ್‌ರೂಮ್‌ಗೆ ಯಾವ ಗಿಡ ಸೂಕ್ತ? ಬಿಸಿಲು ಬೀಳದ ಜಾಗದಲ್ಲಿ ಗಿಡಗಳನ್ನು ಬೆಳೆಸಬಹುದೇ? ಬಾತ್‌ರೂಮ್‌ನಲ್ಲಿ ಗಿಡಗಳನ್ನು ಇಡುವುದರಿಂದ ಏನು ಪ್ರಯೋಜನ? ಅವುಗಳನ್ನು ಆರೋಗ್ಯವಾಗಿಡುವುದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ನಿಮ್ಮ ಬಾತ್‌ರೂಮ್‌ಗೆ ಸುಂದರ, ತಾಜಾ ಮತ್ತು ನ್ಯಾಚುರಲ್ ಲುಕ್ ನೀಡಬೇಕೆ? ಹಾಗಿದ್ರೆ ಕೆಲವು ವಿಶೇಷ ಇಂಡೋರ್ ಗಿಡಗಳು ನಿಮಗೆ ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ಬಾತ್‌ರೂಮ್‌ಗಳಲ್ಲಿ ತೇವಾಂಶ ಹೆಚ್ಚಿರುತ್ತದೆ ಮತ್ತು ಸೂರ್ಯನ ಬೆಳಕು ಕೂಡ ಕಡಿಮೆ ಇರುತ್ತದೆ. ಹೀಗಿರುವಾಗ, ಎಲ್ಲಾ ಗಿಡಗಳು ಅಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ. ಆದರೆ, ಕಡಿಮೆ ಬೆಳಕು ಮತ್ತು ತೇವಾಂಶವಿರುವ ವಾತಾವರಣದಲ್ಲೂ ಸುಲಭವಾಗಿ ಬದುಕುವ ಕೆಲವು ಗಿಡಗಳಿವೆ.

ಈ ಗಿಡಗಳು ಬಾತ್‌ರೂಮ್‌ನ ಅಂದವನ್ನು ಹೆಚ್ಚಿಸುವುದಲ್ಲದೆ, ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ಅವುಗಳ ಬಗ್ಗೆ ತಿಳಿಯೋಣ ಬನ್ನಿ.

ಝೀಝೀ ಪ್ಲಾಂಟ್‌ನ ಎಲೆಗಳು ಹೊಳಪಿನಿಂದ ಕೂಡಿದ್ದು, ಗಾಢ ಹಸಿರು ಬಣ್ಣದಲ್ಲಿರುತ್ತವೆ. ಈ ಗಿಡಕ್ಕೆ ಹೆಚ್ಚು ಆರೈಕೆ ಬೇಕಿಲ್ಲ, ಸುಲಭವಾಗಿ ಬೆಳೆಯುತ್ತದೆ. ಕಡಿಮೆ ಬೆಳಕಿನಲ್ಲೂ ಬೆಳೆಯುವುದರಿಂದ ಇದು ಬಾತ್‌ರೂಮ್‌ಗೆ ಹೇಳಿ ಮಾಡಿಸಿದ್ದು. ಯಾಕೆಂದರೆ, ಈ ಗಿಡದ ಕಾಂಡಗಳು ದಪ್ಪ ಮತ್ತು ತಿರುಳಿನಿಂದ ಕೂಡಿದ್ದು, ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ.

ನಿಮ್ಮ ಬಾತ್‌ರೂಮ್‌ಗೆ ಒಂದು ಕಲರ್‌ಫುಲ್ ಆಯ್ಕೆ ಬೇಕಿದ್ದರೆ, ಚೈನೀಸ್ ಎವರ್‌ಗ್ರೀನ್ ಪ್ಲಾಂಟ್ ಬೆಸ್ಟ್. ಇದು ಅತ್ಯುತ್ತಮ ಇಂಡೋರ್ ಗಿಡಗಳಲ್ಲಿ ಒಂದಾಗಿದ್ದು, ಸಾಧಾರಣ ಬೆಳಕು ಮತ್ತು ತೇವಾಂಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದರ ಎಲೆಗಳಲ್ಲಿ ಹಸಿರು, ಸಿಲ್ವರ್, ಗುಲಾಬಿ ಮತ್ತು ಕೆಂಪು ಬಣ್ಣಗಳಿರುತ್ತವೆ. ಇದು ಹೂವುಗಳಿಲ್ಲದೆಯೇ ನಿಮ್ಮ ಬಾತ್‌ರೂಮ್‌ಗೆ ಬಣ್ಣದ ಮೆರುಗು ನೀಡುತ್ತದೆ.

ಸ್ಪೈಡರ್ ಪ್ಲಾಂಟ್ ಬಾತ್‌ರೂಮ್‌ಗೆ ಒಂದು ಅತ್ಯುತ್ತಮ ಗಿಡ, ಇದರ ಆರೈಕೆ ತುಂಬಾ ಸುಲಭ. ಈ ಗಿಡ ತೇವಾಂಶವಿರುವ ಜಾಗದಲ್ಲಿ ಚೆನ್ನಾಗಿ ಬೆಳೆಯುತ್ತದೆ ಮತ್ತು ಪರೋಕ್ಷ ಬೆಳಕಿನಲ್ಲೂ ಬದುಕಬಲ್ಲದು. ಈ ಗಿಡದ ವಿಶೇಷತೆ ಎಂದರೆ, ಸಮಯ ಕಳೆದಂತೆ ಅದರ ಬುಡದಿಂದ ಹೊಸ ಚಿಕ್ಕ ಗಿಡಗಳು ನೇತಾಡಲು ಪ್ರಾರಂಭಿಸುತ್ತವೆ. ಇದರಿಂದ ಬಾತ್‌ರೂಮ್‌ನ ಶೆಲ್ಫ್ ಮೇಲೆ ಜಲಪಾತದಂತಹ ಸುಂದರ ನೋಟ ಸಿಗುತ್ತದೆ.

ಬ್ಯಾಂಬೂ ಪಾಮ್ ಮನೆಯೊಳಗೆ ಇಡಲು ಬಹಳ ಒಳ್ಳೆಯದು. ಯಾಕೆಂದರೆ ಇದು ತೇವಾಂಶವಿರುವ ಜಾಗವನ್ನು ಇಷ್ಟಪಡುತ್ತದೆ ಮತ್ತು ಬಾತ್‌ರೂಮ್‌ನಲ್ಲಿ ಚೆನ್ನಾಗಿ ಬೆಳೆಯುತ್ತದೆ. ತನ್ನ ಗರಿಯಂತಹ ಹಸಿರು ಎಲೆಗಳಿಂದ ಇದು ಸ್ಪಾ-ರೀತಿಯ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ನಿಮ್ಮ ಬಾತ್‌ರೂಮ್ ಅಲಂಕಾರಕ್ಕೆ ಹೊಸ ಆಯಾಮ ನೀಡುತ್ತದೆ.

ಬಾತ್‌ರೂಮ್‌ಗೆ ಬರ್ಡ್ಸ್ ನೆಸ್ಟ್ ಫರ್ನ್ ಗಿಡ ಒಂದು ಅತ್ಯುತ್ತಮ ಆಯ್ಕೆ. ತನ್ನ ದೊಡ್ಡ ಮತ್ತು ಆಕರ್ಷಕ ರೂಪದಿಂದಾಗಿ ಇದು ಬಾತ್‌ರೂಮ್‌ನ ಯಾವುದೇ ಮೂಲೆಯಲ್ಲಿ ಎದ್ದು ಕಾಣುತ್ತದೆ. ಇದು ತೇವಾಂಶವುಳ್ಳ ಗಾಳಿಯನ್ನು ಇಷ್ಟಪಡುತ್ತದೆ, ಹಾಗಾಗಿ ಬಾತ್‌ರೂಮ್‌ನ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ ಮತ್ತು ಅದನ್ನು ಫ್ರೆಶ್ ಆಗಿಡುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries