ಮುಳ್ಳೇರಿಯ: ಬೆಳ್ಳೂರು ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಕಾಣಿಕೆ ಹುಂಡಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಿನ್ನಿಂಗಾರು ಬಳಿಯ ಮದಕ್ಕ ನಿವಾಸಿ ಸತೀಶ್ (26) ಎಂಬಾತನನ್ನು ಅದೂರು ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಟ್ಟಂಪಾಡಿ ಕ್ಷೇತ್ರವೊಂದರಿಂದ ಕಳವುಗೈದ ಪ್ರಕರಣದಲ್ಲಿ ಪುತ್ತೂರು ಗ್ರಾಮಾಂತರ ಪೆÇಲೀಸರು ಸತೀಶನನ್ನು ಬಂಧಿಸಿದ್ದರು. ಬಳಿಕ ಈತನನ್ನು ತನಿಖೆಗೊಳಪಡಿಸಿದಾಗ ಕಳೆದ ಆಗೋಸ್ಟ್ 24ರಂದು ರಾತ್ರಿ ನೆಟ್ಟಣೆಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಕಾಣಿಕೆ ಹುಂಡಿ ಕಳವು ನಡೆಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಆಗಸ್ಟ್ 18ರಂದು ಕಿನ್ನಿಂಗಾರು ಕೊಚ್ಚಿ ನಿವಾಸಿ, ಕೃಷಿಕ ಮೋಹನಕೃಷ್ಣ ಭಟ್ ಅವರ ರಬ್ಬರ್ ದಾಸ್ತಾನು ಶೆಡ್‍ನಿಂದ 250 ರಬ್ಬರ್ ಶೀಟ್ ಕಳವುಗೈದ ಪ್ರಕರಣದಲ್ಲೂ ಈತ ಆರೋಪಿಯಾಗಿರುವುದಾಗಿ ಪುತ್ತೂರು ಗ್ರಾಮಾಂತರ ಪೆÇಲೀಸರು ಅದೂರು ಠಾನೆ ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅದೂರು ಠಾಣೆ ಪೆÇಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸತೀಶನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ತನಿಖೆಯ ಅಂಗವಾಗಿ ಸತೀಶನನ್ನು ನೆಟ್ಟಣೆಗೆ ಕ್ಷೇತ್ರ ಹಾಗೂ ಮೋಹನಕೃಷ್ಣ ಭಟ್‍ರ ರಬ್ಬರ್ ದಾಸ್ತಾನು ಕೇಂದ್ರಕ್ಕೆ ತಲುಪಿಸಿ ಮಾಹಿತಿ ಸಂಗ್ರಹಿಸಲುಪೊಲೀಸರು ತೀರ್ಮಾನಿಸಿದ್ದಾರೆ.
ನೆಟ್ಟಣೆಗೆ ಕ್ಷೇತ್ರದ ಸಿಸಿ ಟಿವಿ ಕ್ಯಾಮರಾದಿಂದ ಲಭಿಸಿದ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಲು ಪ್ರಯತ್ನ ಮುಂದುವರಿಯುತ್ತಿದ್ದಂತೆ ಸತೀಶ ಪುತ್ತೂರು ಗ್ರಾಮಾಂತರ ಪೆÇಲೀಸರ ಸೆರೆಯಾಗಿದ್ದನು. ಕ್ಷೇತ್ರಕ್ಕೆ ನುಗ್ಗಿದ ಆರೋಪಿ ಎರಡು ಕಾಣಿಕೆ ಹುಂಡಿಗಳನ್ನು ಕಳವುಗೈದಿದ್ದು, ಬಳಿಕ ಒಂದು ಕಾಣಿಕೆ ಹುಂಡಿಯನ್ನು ಕ್ಷೇತ್ರ ಸಮೀಪದಲ್ಲೂ ಇನ್ನೊಂದನ್ನು ಕ್ಷೇತ್ರದಿಂದ ಅನತಿ ದೂರದಲ್ಲಿ ಉಪೇಕ್ಷಿಸಿರುವುದು ಕಂಡುಬಂದಿತ್ತು. ಕಾಣಿಕೆ ಹುಂಡಿಯನ್ನು ತೆರೆಯಲು ಆರೋಪಿಗೆ ಸಾಧ್ಯವಾಗಿರಲಿಲ್ಲ.



