HEALTH TIPS

ಬಾರ್ಬರ್ ಶಾಪ್‍ನಲ್ಲಿ ಬಾಲಕಗೆ ಕಿರುಕುಳ, ಪೋಕ್ಸೋ ಅನ್ವಯ ಕಾರ್ಮಿಕನ ಬಂಧನ: ನಾಗರಿಕರಿಂದ ಅಂಗಡಿಗೆ ಆಕ್ರಮಣ

ಕಾಸರಗೋಡು: ತಲೆಗೂದಲು ಕತ್ತರಿಸಲು ಸೆಲೂನ್‍ಗೆ ಆಗಮಿಸಿದ್ದ ಬಾಲಕಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ, 17ರ ಹರೆಯದ ಅನ್ಯರಾಜ್ಯ ಕಾರ್ಮಿಕನನ್ನು ಚಂದೇರ ಠಾಣೆ ಪೊಲೀಸರುಬಂಧಿಸಿದ್ದಾರೆ. ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ. ಬಾಲಕಗೆ ಕರುಕುಳ ನೀಡಿದ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನಾಗರಿಕರು ಆಕ್ರೋಶಿತರಾಗಿ ಅಂಗಡಿಗೆ ಹಾನಿಯೆಸಗಿದ್ದಾರೆ.  


ಚಂದೇರ ಪೆÇಲೀಸ್ ಠಾಣೆ ವ್ಯಾಪ್ತಿಯ ವಾಣಿಯನ್ನಾರ್ ವಾಸೀದಿ ಸಮೀಪದ ಬಾರ್ಬರ್ ಶಾಪ್‍ನಲ್ಲಿ ಘಟನೆ ನಡೆದಿದೆ.  ಅಂಗಡಿ ಮಾಲಕಿ  ನೀಡಿದ ದೂರಿನನ್ವಯ ನಿಖಿಲ್, ಅನೂಪ್, ಸೇರಿದಂತೆ ಮೂರು ಮಂದಿ ವಿರುದ್ಧ ಚಂದೇರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಬಾರ್ಬರ್ ಶಾಪ್‍ನ ಬೀಗ ಹಾಗೂ ಬೋರ್ಡ್ ನಾಶಪಡಿಸಿ ಇನ್ನೊಂದು ಬೋರ್ಡನ್ನು ತಂಡವೊಂದು ತೆಗೆದುಕೊಂಡು ಹೋಗಿದ್ದು,  15,000 ರೂ. ನಷ್ಟ ಉಂಟುಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. 

ಕೂದಲುಕತ್ತರಿಸಲು ತಂದೆಯೊಂದಿಗೆ ಬಾರ್ಬರ್‍ಶಾಪ್‍ಗೆ ಬಾಲಕ ಆಗಮಿಸಿದ್ದನು. ತಂದೆ ಬಾಲಕನನ್ನು ಕುಳ್ಳಿರಿಸಿ, ಹೊರಹೋಗಿದ್ದು ಈ ಮಧ್ಯೆ ಬಾರ್ಬರ್ ಕಾರ್ಮಿಕ ಬಾಲಕಗೆ ಕಿರುಕುಳ ನೀಡಿದ್ದಾನೆ. ಈ ಸಂದರ್ಭ ಬೊಬ್ಬಿಡುತ್ತಿದ್ದಂತೆ  ಆಸುಪಾಸಿನವರು ಆಗಮಿಸಿದಾಗ ಬಾಲಕ ಘಟನೆ ಬಗ್ಗೆಮಾಹಿತಿ ನೀಡಿದ್ದಾನೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅಂಗಡಿಗೆ ಆಕ್ರಮಣ ನಡೆಸಿದ್ದಾರೆ. 











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries