ಕುಂಬಳೆ: ಅನಂತಪುರ ಉದ್ದಿಮೆ ಪಾರ್ಕ್‍ನ ಫ್ಯಾಕ್ಟರಿಗಳಿಂದ ಹೊರ ಸೂಸುವ ದುರ್ನಾತಕ್ಕೆ ಪರಿಹಾರ ಕಾಣಲು ತುರ್ತು ಕ್ರಮ ಕೈಗೊಳ್ಳಬೇಕು, ಜನರ ಜೀವ ಹಾಗೂ ಸೊತ್ತಿಗೆ ಬೆದರಿಕೆಯಾಗುವ ಕೈಗಾರಿಕೆಗಳನ್ನು ಮುಚ್ಚುಗಡೆಗೊಳಿಸಬೇಕೆಂದು ಒತ್ತಾಯಿಸಿ ಸೋಮವಾರ ಬೆಳಿಗ್ಗೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅನಂತಪುರ ಉದ್ದಿಮೆ ಪಾರ್ಕ್‍ಗೆ ಮಾರ್ಚ್ ನಡೆಸಲಾಯಿತು.
ನೂರಾರು ಮಂದಿ ಭಾಗವಹಿಸಿದ ಮಾರ್ಚ್ ನಾಯ್ಕಾಪಿನಿಂದ ಆರಂಭಗೊಂಡಿತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮಾರ್ಚ್ ಉದ್ಘಾಟಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ ಶೆರೀಫ್ ಟಿ, ಕಾರ್ಯದರ್ಶಿ ಸುನಿಲ್ ಅನಂತಪುರ, ಉಪಾಧ್ಯಕ್ಷ ಎ.ಕೆ. ಅಶ್ರಫ್, ಜಿಲ್ಲಾ ಪಂಚಾಯತಿ ಸದಸ್ಯ ಸೋಮಶೇಖರ ಜೆ.ಎಸ್, ಪುತ್ತಿಗೆ ಪಂಚಾಯತಿ ಅಧ್ಯಕ್ಷೆ ಫಿದಾ, ಉಪಾಧ್ಯಕ್ಷ ಇ.ಕೆ. ಮೊಹಮ್ಮದ್ ಕುಂಞÂ್ಞ, ಕುಂಬಳೆ ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಬ್ಲಾಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಮೊದಲಾದವರು ನೇತೃತ್ವ ನೀಡಿದರು. ಮಾರ್ಚ್‍ಗೆ ಉದ್ದಿಮೆ ಪಾರ್ಕ್ ಬಳಿ ಪೋಲೀಸರು ತಡೆಯೊಡ್ಡಿದರು.

.jpg)
.jpg)
