ನಾಮಪತ್ರ ಹಿಂಪಡೆಯುವ ಗಡುವು ಮುಗಿದ ನಂತರ ನಾಮನಿರ್ದೇಶನಗೊಂಡ ಅಭ್ಯರ್ಥಿಗಳ ಸಂಖ್ಯೆಯು ಭರ್ತಿ ಮಾಡಬೇಕಾದ ಸ್ಥಾನಗಳ ಸಂಖ್ಯೆಗೆ ಸಮವಾಗಿದ್ದುದರಿಂದ ಅವರನ್ನು ಚುನಾಯಿತರೆಂದು ಘೋಷಿಸಲಾಯಿತು.
ಬಿಜೆಪಿ ಅಭ್ಯರ್ಥಿಗಳಾದ ಸತೀಶ್ ಪೂನಿಯಾ, ಅಲ್ಕಾ ಗುರ್ಜರ್ ಹಾಗೂ ಕಾಂಗ್ರೆಸ್ನ ನೀರಜ್ ಡಾಂಗಿ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.
ಕಾಂಗ್ರೆಸ್ ಸಂಸದ ನೀರಜ್ ಡಾಂಗಿ ಮತ್ತು ಬಿಜೆಪಿ ಸಂಸದರಾದ ರಾಜೇಂದ್ರ ಗೆಹ್ಲೋಟ್, ರವನೀತ್ ಸಿಂಗ್ ಅವರ ಅಧಿಕಾರಾವಧಿ ಜೂನ್ 21ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಮೂರು ರಾಜ್ಯ ಸಭಾ ಸ್ಥಾನಗಳಿಗೆ ಈ ದ್ವೈವಾರ್ಷಿಕ ಚುನಾವಣೆ ನಡೆಯುತ್ತಿತ್ತು.

