ಕಾಸರಗೋಡು: ಬ್ಲಾಕ್ ಪಂಚಾಯಿತಿಯ 2025-26ನೇ ಸಾಲಿಗೆ ಜಾರಿಗೆ ತರಲಾದ ವಿಕಲಚೇತನರಿಗೆ ವಾಹನ ವಿತರಿಸುವ ಯೋಜನೆಯ ಅಂಗವಾಗಿ 14 ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು. ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಸಮಾರಂಭ ಉದ್ಘಾಟಿಸಿದರು.
ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅಬ್ದುಲ್ಲಕುಞÂ ಚೆರ್ಕಳ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮರಿಯಾ ಮಾಹಿನ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಮೊಯ್ದು, ಚೆಂಗಳಗ್ರಾ.ಪಂ.ಅಧ್ಯಕ್ಷ ವಸಂತ ಅಜಕೋಡ್, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಡಿ.ಶಂಕರ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅರಫಾನ ನಜೀಬ್, ಚೆಮ್ನಾಡು ಗ್ರಾ.ಪಂ.ಅಧ್ಯಕ್ಷೆ ಆಯೇಷಾ ಅಬೂಬಕ್ಕರ್, ಬ್ಲಾಕ್ ಪಂಚಾಯಿತಿ ಸದಸ್ಯರಾದ ಜೇಮ್ಸ್ ಸಿ.ವಿ., ಅನ್ವರ್ ಗೋಳಿಯಡ್ಕ, ಸಕೀನಾ ಅಬ್ದುಲ್ಲಾಹಾಜಿ, ನಜೀಫಾ ಜಲೀಲ್, ನಜೀಮಾ ಪಿ.ಎಂ., ಪೃಥ್ವಿರಾಜ್ ಶೆಟ್ಟಿ, ಜೋಯಾ ಲತೀಫ್, ಲೀಲಾ ಕೆ, ಅಸ್ಮಿನಾ ಹಬೀಬ್, ಶಾಹಿದಾ ಅಫ್ಜಲ್, ಸಫೀನಾ ಹುಸೇನ್, ಮಹೇಶ್ ವಳಕುಂಜ ಉಪಸ್ಥಿತರಿದ್ದರು. ಬ್ಲಾಕ್ ಪಂಚಯಿತಿ ಉಪಾಧ್ಯಕ್ಷೆ ಉಷಾ ಅರ್ಜುನನ್ ಸ್ವಾಗತಿಸಿದರು. ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ರಸೀನ ಸಿ.ಕೆ ವರದಿ ಮಂಡಿಸಿದರು. ಸಿಡಿಪಿಒ ತಿಲಾ ವಂದಿಸಿದರು.

