ಬದಿಯಡ್ಕ: ಪೆರಡಾಲ ಹದಿಮೂರನೇ ವಾರ್ಡ್ ಬಿಜೆಪಿ ಸಮಿತಿಯ ವತಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಬೀಜಂತಡ್ಕ ಇಳಂತೋಡಿ ಕಿರಣ, ರೇಖ ದಂಪತಿಗಳ ಪುತ್ರಿ ನವಜೀವನ ಹೈಸ್ಕೂಲ್‍ನ ವಿದ್ಯಾರ್ಥಿನಿ ರೋಷಿಕಾ ಕಿರಣ್‍ಳನ್ನು ಅಭಿನಂದಿಸಲಾಯಿತು.
ವಾರ್ಡ್ ಸಮಿತಿ ಅಧ್ಯಕ್ಷ, ಹಿರಿಯ ಬಿಜೆಪಿ ಕಾರ್ಯಕರ್ತ ಎಂ. ನಾರಾಯಣ ಭಟ್ ಮೈರ್ಕಳ ಹಾಗೂ ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ, ವಾರ್ಡ್ ಪ್ರತಿನಿಧಿ ಅಶ್ವಿನಿ ಕೆ.ಯಂ. ಜಂಟಿಯಾಗಿ ಶಾಲು ಹೊದಿಸಿ ಗೌರವಿಸಿದರು. ವಾರ್ಡ್ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ ಪೆರಡಾಲ, ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ರಾಮಚಂದ್ರ ಮಣಿಯಾಣಿ ಸ್ವಾಗತಿಸಿ, ನಾರಾಯಣ ಮಣಿಯಾಣಿ ಇಳಂತೋಡಿ ವಂದಿಸಿದರು, ನಂತರ ಸಿಹಿತಿಂಡಿ ವಿತರಿಸಲಾಯಿತು.

.jpg)
.jpg)
