HEALTH TIPS

ಶ್ವೇತಭವನದ ಯುಎಫ್‍ಸಿ ಟೂರ್ನಿ ಗುರಿಯಾಗಿಸಿದ್ದ `ಯೋಜಿತ ದಾಳಿ' ಹತ್ತಿಕ್ಕಿದ ಎಫ್‍ಬಿಐ: ಐವರ ಬಂಧನ

ವಾಷಿಂಗ್ಟನ್: ಕಳೆದ ವಾರಾಂತ್ಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನ್ಮದಿನದ ಅಂಗವಾಗಿ ಶ್ವೇತಭವನದಲ್ಲಿ ಆಯೋಜಿಸಲಾಗಿದ್ದ ಯುಎಫ್‍ಸಿ `ಕೇಜ್-ಫೈಟಿಂಗ್' ಪಂದ್ಯಾವಳಿಯನ್ನು ಗುರಿಯಾಗಿಸಿಕೊಂಡಿದ್ದ `ಯೋಜಿತ ದಾಳಿಗಳನ್ನು' ಕಾನೂನು ಜಾರಿ ಅಧಿಕಾರಿಗಳು ಯಶಸ್ವಿಯಾಗಿ ಹತ್ತಿಕ್ಕಿದ್ದಾರೆ ಮತ್ತು ಈ ಸಂಬಂಧ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಫ್‍ಬಿಐ ನಿರ್ದೇಶಕ ಕಾಶ್ ಪಟೇಲ್ ಮಂಗಳವಾರ ತಿಳಿಸಿದ್ದಾರೆ.

ಓಹಿಯೋ, ಮಿಸೌರಿ ಮತ್ತು ಕ್ಯಾಲಿಫೋರ್ನಿಯಾ ಸೇರಿದಂತೆ ವಿವಿಧ ರಾಜ್ಯಗಳಿಂದ ಐದು ಜನರನ್ನು ಬಂಧಿಸಲಾಗಿದೆ ಎಂದು ಕಾನೂನು ಜಾರಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

ಶ್ವೇತಭವನದ ಸೌತ್‍ಲಾನ್‍ನಲ್ಲಿ ನಡೆದ ಈ `ಮಿಕ್ಸ್‍ಡ್ ಮಾರ್ಷಲ್ ಆಟ್ರ್ಸ್' ಪಂದ್ಯಾವಳಿಗೂ ನಾಲ್ಕು ದಿನಗಳ ಮುನ್ನ(ಜೂನ್ 10ರಂದು) ಎಫ್‍ಬಿಐಗೆ ಈ ಸಂಭಾವ್ಯ ಬೆದರಿಕೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ತ್ವರಿತ ಬಹು-ರಾಜ್ಯ ಕಾರ್ಯಾಚರಣೆಯ ಫಲವಾಗಿ, ಐದು ಮಂದಿಯನ್ನು ಈಗ ವಶಕ್ಕೆ ಪಡೆಯಲಾಗಿದೆ ಮತ್ತು ಅವರು ಯೋಜಿಸಿದ್ದ ದಾಳಿಗಳನ್ನು ಸಂಪೂರ್ಣವಾಗಿ ತಡೆಯಲಾಗಿದೆ' ಎಂದು ಕಾಶ್ ಪಟೇಲ್ `ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries