HEALTH TIPS

ಲೆಬನಾನ್‌ನಲ್ಲಿ ನಮ್ಮ ಸೇನೆ ಇರಲಿದೆ, ಒಪ್ಪಂದ ಅಮೆರಿಕದ್ದು: ನೆತನ್ಯಾಹು ಅಸಮಾಧಾನ

 ಇರಾನ್-ಅಮೆರಿಕ ನಡುವೆ ಏರ್ಪಟ್ಟಿರುವ ಒಪ್ಪಂದಕ್ಕೆ ಬದ್ಧರಾಗುವುದಿಲ್ಲ ಎನ್ನುವ ಸೂಚನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿದ್ದಾರೆ. ಸೋಮವಾರ ದೇಶವನ್ನುದ್ದೇಶಿಸಿ ನಡೆಸಿದ ಆಕ್ರಮಣಕಾರಿ ಭಾಷಣದಲ್ಲಿ ಅವರು ಒಪ್ಪಂದದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 'ಹೋರಾಟ ನಿಂತಿಲ್ಲ' ಎಂದು ಅವರು ಹೇಳಿದ್ದಾರೆ. 


ನೆರೆಯ ಲೆಬನಾನ್‌ನಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಉದ್ದೇಶ ಇಲ್ಲ ಎಂದು ಅವರು ಹೇಳಿದ್ದಾರೆ. ಅಮೆರಿಕ-ಇರಾನ್ ಶಾಂತಿ ಒಪ್ಪಂದದಲ್ಲಿ ಇರುವ ಪ್ರಮುಖ ವಿಷಯದಲ್ಲಿ ಇದೂ ಒಂದಾಗಿದೆ. ಲೆಬನಾನ್‌ನಲ್ಲಿರುವ ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಇಸ್ರೇಲ್ ಸೇನೆ ಹೋರಾಟ ಮಾಡುತ್ತಿದೆ.

ಮಾರ್ಚ್‌ನಲ್ಲಿ ಇಸ್ರೇಲ್ ಹಾಗೂ ಅಮೆರಿಕ ಸೇರಿ ಇರಾನ್ ಮೇಲೆ ದಾಳಿ ನಡೆಸಿದಾಗ, ಇರಾನ್‌ಗೆ ಬೆಂಬಲವಾಗಿ ಹಿಜ್ಬುಲ್ಲಾ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಉಭಯರ ನಡುವೆ ಸಂಘರ್ಷಗಳು ನಡೆಯುತ್ತಲೇ ಬಂದಿದೆ.

'ನಾನು ಸ್ಪಷ್ಪಪಡಿಸುತ್ತಿದ್ದೇನೆ. ನಮ್ಮ ದೇಶವನ್ನು ರಕ್ಷಿಸಿಕೊಳ್ಳಲು ಭದ್ರತಾ ವಲಯಗಳಲ್ಲಿ ನಮ್ಮ ಸೇನೆ ಕಾರ್ಯನಿರ್ವಹಿಸಲಿದೆ' ಎಂದು ಅವರು ಹೇಳಿದ್ದಾರೆ.

ದಕ್ಷಿಣ ಲೆಬನಾನ್‌ನಲ್ಲಿ ವಶಪಡಿಸಿಕೊಂಡಿರುವ ಪ್ರದೇಶವನ್ನು ಇಸ್ರೇಲಿ ಪಡೆಗಳು 'ಭದ್ರತಾ ವಲಯ' ಎನ್ನುತ್ತದೆ.

ಡೊನಾಲ್ಡ್ ಟ್ರಂಪ್ ಅವರ ಆಶಯ ಹಾಗೂ ಇಚ್ಛೆಗೆ ಅನುಗುಣವಾಗಿ ದೇಶದ ಭದ್ರತೆಯನ್ನು ರಾಜಿ ಮಾಡಿಕೊಂಡಿದ್ದಾರೆ ಎಂದು ಎದುರಾಳಿಗಳಿಂದ ಟೀಕೆ ಎದುರಿಸುತ್ತಿರುವ ನೆತನ್ಯಾಹು, ತಾವು ಅಮೆರಿಕ ಅಧ್ಯಕ್ಷರಿಗೆ ಆಪ್ತನಾಗಿದ್ದರೂ, ಸ್ವತಂತ್ರನಾಗಿದ್ದೇನೆ ಎನ್ನುವುದನ್ನು ಪದೇ ಪದೇ ಸಾಬೀತುಪಡಿಸಲು ಹವಣಿಸುತ್ತಿದ್ದಂತೆ ಕಾಣಿಸುತ್ತಿತ್ತು.

'ಅದು ಎರಡು ಪಾಲುದಾದರರ ಸಂಬಂಧ. ಇಬ್ಬರು ನಾಯಕರು ಕೆಲವೊಮ್ಮೆ ಒಮ್ಮತಕ್ಕೆ ಬರುತ್ತೇವೆ, ಕೆಲವೊಮ್ಮೆ ಇಲ್ಲ. ಸಾಮರಸ್ಯದಿಂದ ಕುಟುಂಬದಲ್ಲೂ ಇದು ನಡೆಯುತ್ತದೆ' ಎಂದು ನೆತನ್ಯಾಹು ಹೇಳಿದ್ದಾರೆ.

ಅಮೆರಿಕ ಮಾಡಿಕೊಂಡ ಒಪ್ಪಂದಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ ಅವರು, ಇರಾನ್ ಮೇಲಿನ ದಾಳಿ ಇಸ್ರೇಲ್‌ನ ಗೆಲುವು ಕೂಡ ಎಂದು ಹೇಳಿದ್ದಾರೆ. ಇಸ್ರೇಲ್ ಹಾಗೂ ಅಮೆರಿಕ ದಾಳಿ ನಡೆಸದಿದ್ದರೆ, ಇರಾನ್ ಈಗಾಗಲೇ ಅಣ್ವಸ್ತ್ರ ಹೊಂದಿರುತ್ತಿತ್ತು. ಇಸ್ರೇಲಿಗರ ಮಾರಣಹೋಮ ನಡೆಯುತ್ತಿತ್ತು ಎಂದು ಹೇಳಿದ್ದಾರೆ.

ಒಪ್ಪಂದ ಮಾಡಿಕೊಂಡಿದ್ದು ಅಮೆರಿಕ. ಅದು ಅವರ ನಿರ್ಧಾರ ಎಂದು ಒತ್ತಿ ಹೇಳಿದ್ದಾರೆ. ನಮಗೆ ನಮ್ಮದೇ ಅದ ಹಿತಾಸಕ್ತಿಗಳಿವೆ ಎಂದು ಅವರು ನುಡಿದಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries