HEALTH TIPS

ಅಕ್ರಮ ಸಾಗಾಟದ ಅಲ್ಯುಮೀನಿಯಂ ವಿದ್ಯುತ್ ತಂತಿ ವಶ-ಗುತ್ತಿಗೆದಾರ ಸೇರಿ ನಾಲ್ವರ ಬಂಧನ

ಕಾಸರಗೋಡು: ವಿದ್ಯುತ್ ಲೈನ್ ಅಳವಡಿಸಲು ಉಪಯೋಗಿಸುವ ಅಲ್ಯುಮೀನಿಯಂ ತಂತಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಗುತ್ತಿಗೆದಾರ ಸೇರಿದಂತೆ ನಾಲ್ವರನ್ನು ರಾಜಾಪುರಂ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ರಾಜಪುರಂ ವಿದ್ಯುತ್ ಸೆಕ್ಷನ್ ಕಚೇರಿಯ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆಗೆ ಸಂಬಂಧಿಸಿದ ಕೆಲಸದ ಗುತ್ತಿಗೆದಾರ ಬಳಾಂತೋಡ್ ಅರಿತೋಡ್ ನಿವಾಸಿ ವಿನೋದ್ ಕುಮಾರ್ (52), ಕಣ್ಣೂರಿನ ಗುಜರಿ ವ್ಯಾಪಾರಿ ದಾರುಲ್ ಮಾಲ್ ವೇಟಿಲ್ ಕೆ.ಪಿ. ಶಫೀಕ್ (42), ಗುಜರಿ ಅಂಗಡಿಯ ಕಾರ್ಮಿಕರಾದ ಅಸ್ಸಾಂ ನಿವಾಸಿ ಸೈಫುದ್ದೀನ್ ಅಹ್ಮದ್ (32) ಮತ್ತು ಆಲಂಬೀರ್ ಹುಸೈನ್ (18) ಬಂಧಿತರು. ಸಾಮಗ್ರಿ ಮತ್ತು ಸಾಗಿಸಲು ಉಪಯೋಗಿಸಿದ ವಾಹನವನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ರಾಜಪುರಂ ಪೆÇಲೀಸರು ಕಳ್ಳಾರಿನಲ್ಲಿ ವಾಹನ ತಪಾಸಣೆ ಸಂದರ್ಭ ಈ  ದಾರಿಯಾಗಿ ಆಗಮಿಸಿದ ಪಿಕ್‍ಅಪ್ ವಾಹನವನ್ನು ಪೆÇಲೀಸರು ತಡೆದು ತಪಾಸಣೆ ನಡೆಸಿದಾಗ ಸಾಮಗ್ರಿಪತ್ತೆಯಾಗಿತ್ತು.  ವಶಪಡಿಸಿಕೊಂಡಿರುವ ಸಾಮಗ್ರಿ ಮೌಲ್ಯ 75ಸವಿರ ರೂ. ಅಂದಾಜಿಸಲಾಗಿದೆ.  ಮಾರಾಟಕ್ಕಾಗಿ ಇವುಗಳನ್ನು ಸಾಗಿಸುತ್ತದ್ದರೆನ್ನಲಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries