'ಸಂಸತ್ ಮಾರ್ಗ ಪೊಲೀಸ್ ಠಾಣೆಯಲ್ಲಿರುವ ಡೈರಿಯಲ್ಲಿ ಜುಲೈ 22ರಂದು ಮಧ್ಯಾಹ್ನ 1ಗಂಟೆ 24ನಿಮಿಷಕ್ಕೆ ಈ ಘಟನೆಯ ಬಗ್ಗೆ ದೂರು ದಾಖಲಿಸ ಲಾಗಿದೆ. ಈ ವೇಳೆ ನೀಲಿ ಸಮವಸ್ತ್ರ ಧರಿಸಿದ್ದ ಕಾರ್ಯಪಡೆಯು ದೆಹಲಿಯ ಡಿಸಿಪಿ ಶ್ರೇಣಿಯ ಪೊಲೀಸ್ ಅಧಿಕಾರಿಯ ಜೊತೆ ಕರ್ತವ್ಯ ನಿರ್ವಹಿಸಿದೆ' ಎಂದು ಆರ್ಎಎಫ್ನ ಡೆಪ್ಯುಟಿ ಕಮಾಂಡೆಂಟ್ ಶ್ರೇಣಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಡಿಸಿಪಿ ನಿರ್ದೇಶನದಂತೆ 55 ನಾನ್ ಎಲೆಕ್ಟ್ರಿಕಲ್ ಶೆಲ್ಗಳು, 15 ಎಲೆಕ್ಟ್ರಿಕಲ್ ಶೆಲ್ಗಳು, 5 ಅಶ್ರುವಾಯು ಗ್ರೆನೇಡ್ಗಳು, ಎರಡು ಸುತ್ತು ಮಾರಕವಲ್ಲದ ಶಸ್ತ್ರಾಸ್ತ್ರಗಳು ಮತ್ತು ಎರಡು ಸುತ್ತು ಪ್ಲಾಸ್ಟಿಕ್ ಪೆಲೆಟ್ಗಳನ್ನು ಆರ್ಎಎಫ್ ಬಳಕೆ ಮಾಡಿದೆ' ಎಂದು ಅಧಿಕಾರಿಯು ಪೊಲೀಸ್ ದಾಖಲೆಗಳನ್ನು ಉಲ್ಲೇಖಿಸಿ ಹೇಳಿದರು.
ಇತರ ಪ್ರತಿಭಟನಾ ಸ್ಥಳಗಳಲ್ಲಿ ಆರ್ಎಎಫ್ ಹೆಚ್ಚು ಪೆಲ್ಲೆಟ್ಗಳನ್ನು ಬಳಕೆ ಮಾಡಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ಪೆಲ್ಲೆಟ್ ಬಳಸಿರುವ ಬಗ್ಗೆ ಸಿಆರ್ಪಿಎಫ್ ಮತ್ತು ಆರ್ಎಎಫ್ ಈವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ.
'ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಪೆಲ್ಲೆಟ್ ಬಳಸಲಾಗಿದೆ ಎಂಬ ಆರೋಪ ಸುಳ್ಳು ಮತ್ತು ದಾರಿತಪ್ಪಿಸುವಂತದ್ದು' ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

