HEALTH TIPS

ಭಾರತದಲ್ಲಿ 'ಬಿಗ್ ಬಾಶ್' ಟೂರ್ನಿ ಉದ್ಘಾಟನಾ ಪಂದ್ಯ: ಆಸ್ಟ್ರೇಲಿಯಾ ಪ್ರಧಾನಿ ಘೋಷಣೆ

 ಸಿಡ್ನಿ: ಪ್ರಮುಖ ಕ್ರಿಕೆಟ್‌ ಟೂರ್ನಿಯಾಗಿರುವ ಬಿಗ್‌ ಬಾಶ್ ಲೀಗ್‌ನ ಉದ್ಘಾಟನಾ ಪಂದ್ಯವು ಚೆನ್ನೈನಲ್ಲಿ ಜರುಗಲಿದೆ. ಈ ಬಾರಿಯ ಟೂರ್ನಿಯು ಡಿಸೆಂಬರ್‌ನಲ್ಲಿ ಆರಂಭವಾಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ. 


ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವೇಳೆಯೇ ಈ ಮಹತ್ವದ ಘೋಷಣೆಯನ್ನು ಮಾಡಲಾಗಿದೆ.

ಆಸ್ಟ್ರೇಲಿಯಾ ಮತ್ತು ಭಾರತವು ಕ್ರೀಡೆಯ ಮೇಲಿನ ಪ್ರೀತಿ ಮತ್ತು ಉತ್ಸಾಹದಿಂದ ಒಂದಾಗಿವೆ. ಕ್ರೀಡಾ ಕ್ಷೇತ್ರದಲ್ಲಿ ಭಾರತದೊಂದಿಗಿನ ಸಹಕಾರವನ್ನು ವಿಸ್ತರಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಆಸ್ಟ್ರೇಲಿಯನ್ನರಿಗೆ ಸಂತೋಷವಾಗುವುದರ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮ ಮತ್ತು ಹೂಡಿಕೆಯನ್ನೂ ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.

ಡಿಸೆಂಬರ್‌ 12ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಬಿಗ್‌ ಬಾಶ್ ಲೀಗ್‌ನ ಹಾಲಿ ಚಾಂಪಿಯನ್ ಪರ್ತ್ ಸ್ಕಾರ್ಚರ್ಸ್ ಹಾಗೂ ಮೆಲ್ಬೋರ್ನ್ ರೆನೆಗೇಡ್ಸ್ ತಂಡಗಳು ಚೆನ್ನೈನ ಎಂ.ಎ. ಚಿದಂಬರಂ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಇದೇ ಮೊದಲ ಬಾರಿಗೆ ಈ ಟೂರ್ನಿಯ ಪಂದ್ಯಗಳು ಆಸ್ಟ್ರೇಲಿಯಾದ ಹೊರಗೆ ಜರಗುತ್ತಿದೆ.

ಜಗತ್ತಿನ ಪ್ರಮುಖ ಟಿ-20 ಟೂರ್ನಿಗಳಲ್ಲಿ ಒಂದಾಗಿರುವ ಬಿಗ್‌ ಬಾಶ್ ಲೀಗ್‌ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುವ ಮತ್ತು ಭಾರತದಲ್ಲಿ ಟೂರ್ನಿಯ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 








2026ರ ಡಿಸೆಂಬರ್‌ನಲ್ಲಿ ಭಾರತದಾದ್ಯಂತ 'ಜಿ-ಡೇ ನಮಸ್ತೆ' ಹೆಸರಿನಲ್ಲಿ ಸಾಂಸ್ಕೃತಿ, ವ್ಯಾಪಾರ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ವೇಳೆ ಬಿಗ್‌ ಬಾಶ್ ಲೀಗ್‌ನ ಪಂದ್ಯವೂ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries