HEALTH TIPS

ಪೆರ್ಲ ನೇತಾಜಿಯಲ್ಲಿ 'ಕನ್ನಡಿಯಲ್ಲಿ ಕನ್ನಡಿಗರು' ಪುಸ್ತಕ ವಿಮರ್ಶೆ

ಪೆರ್ಲ: ಅಮೂರ್ತ ಕಲ್ಪನಾ ಶಕ್ತಿಯನ್ನು ಶೋಧಿಸುವ ಶೋಧಕ ಪುಸ್ತಕವಾಗಿದೆ. ಇಂತಹ ಅಮೂಲ್ಯವಾದ ವಸ್ತು ಆಧುನೀಕರಣ ನಾಗಲೋಟದಲ್ಲಿ ನಮ್ಮ ನಡುವಿನಿಂದ ದೂರವಾಗಬಾರದು. ಮನುಷ್ಯನೊಂದಿಗೆ ಜೊತೆಯಾಗುವ ಜ್ಞಾನ ಸಂಪತ್ತು ಸದಾ ಜೀವಂತವಾಗಿರುವುದನ್ನು ಕಾಪಾಡಿ ಪೋಷಸಬೇಕು. ಭವಿಷ್ಯದ ಜನಾಂಗಕ್ಕೆ ರವಾನಿಸುವ ಪ್ರಕ್ರಿಯೆಗಳು ಗ್ರಂಥಾಲಯಗಳ ಮೂಲಕ ಜರುಗುತ್ತಿರುವುದು ಒಂದು ಆಶಾದಾಯಕವಾಗಿದೆ ಎಂದು ತಾಲೂಕು ಲೈಬ್ರೇರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಮೊಳಕ್ಕಾಲ್ ತಿಳಿಸಿದರು. 


ನೇತಾಜಿ ಸಾರ್ವಜನಿಕ ಗ್ರಂಥಾಲಯ ಪೆರ್ಲ ಇದರ ವಾಚನಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಡಾ. ಬೇ.ಸಿ. ಗೋಪಾಲಕೃಷ್ಣ ಭಟ್ ಅವರು ಡಾ. ರಮಾನಂದ ಬನಾರಿ ಅವರ ಸಂಪಾದಿತ ಹದಿನೇಳು ಸಾಧಕರ 'ಕನ್ನಡಿಯಲ್ಲಿ ಕನ್ನಡಿಗರು' ಕೃತಿಯನ್ನು ಪರಿಚಯಿಸಿ ಮಾತಾನಾಡಿದರು. ಜಿಲ್ಲಾ ಕೌನ್ಸಿಲ್ ಸದಸ್ಯ ಸಲಾಹುದ್ದೀನ್ ಮಾಸ್ತರ್, ಸಾಹಿತಿಗಳಾದ ಬಾಲಕೃಷ್ಣ ಬೇರಿಕೆ, ಸುಂದರ ಬಾರಡ್ಕ, ಸಾಮಾಜಿಕ ಕಾರ್ಯಕರ್ತ ವಿನೋದ್ ಅಮೆಕ್ಕಳ ಶುಭಾಶಂಸನೆಗೈದರು. ಎಣ್ಮಕಜೆ ಗ್ರಂಥಾಲಯ ಒಕ್ಕೂಟದ ಕನ್ವೀನರ್ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಲೈಬ್ರೆರಿ ಕೌನ್ಸಿಲ್ ಸದಸ್ಯ ಉದಯ ಸಾರಂಗ ಸ್ವಾಗತಿಸಿ, ಗ್ರಂಥಪಾಲಕಿ ಉಷಾ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries