ಉಪ್ಪಳ: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ 'ರಜತ ರಂಗ' ಸರಣಿ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ದೇಲಂತೊಟ್ಟು ಬಜೆ ಕ್ಷೇತ್ರದಲ್ಲಿ ಸರಣಿಯ 17 ನೇ ಮತ್ತು 18ನೇ ಕಾರ್ಯಕ್ರಮ ಶ್ರೀ ಕ್ಷೇತ್ರದ ರಾಮಾಯಣ ಮಾಸಚರಣೆಯ ಸಂದರ್ಭ ನಡೆಯಿತು. ಇದರಂಗವಾಗಿ ನಡೆದ ಅಂಗದ ಸಂಧಾನ ತಾಳಮದ್ದಳೆಯಲ್ಲಿ ಭಾಗವತರಾಗಿ ರಾಮಪ್ರಸಾದ್ ಮಯ್ಯ ಕೂಡ್ಲು, ಚಂಡೆ ಮದ್ದಳೆಯಲ್ಲಿ ರಾಮಮೂರ್ತಿ ಕುದ್ರೆಕೂಡ್ಲು, ಕೃಷ್ಣ ಚೈತನ್ಯ ಚೇರಾಲು, ಚಕ್ರತಾಳದಲ್ಲಿ ಗೌತಮ್ ನಾವಡ, ಅರ್ಥಧಾರಿಗಳಾಗಿ ನಾ.ಕಾರಂತ ಪೆರಾಜೆ, ಗುರುರಾಜ ಹೊಳ್ಳ ಬಾಯಾರು, ಮಮತ ನಾವಡ ಮಜಿಬೈಲು, ಗುರುಪ್ರಸಾದ ಹೊಳ್ಳ ತಿಂಬರ ಭಾಗವಹಿಸಿದರು.
ಬಳಿಕ ಕೀರ್ತಿಶೇಷ ಕಲಾವಿದರಾದ ರಾಮಮೂರ್ತಿ ಕುದ್ರೆಕೂಡ್ಲು ಮತ್ತು ಬಾಲಕೃಷ್ಣ ಮಯ್ಯ ಮಲೆಂದೂರು ಇವರ ಸಂಸ್ಮರಣೆ ನಡೆಯಿತು. ಕುದ್ರೆಕೂಡ್ಲು ರಾಮ್ ಭಟ್ ಅವರ ಸಂಸ್ಮರಣೆಯನ್ನು ಪ್ರಸಂಗಕರ್ತ ಸಾಹಿತಿ ಯೋಗೀಶರಾವ್ ಚಿಗುರುಪಾದೆ ಹಾಗೂ ಬಾಲಕೃಷ್ಣ ಮಯ್ಯ ಮಲೆಂದೂರು ಇವರ ಸಂಸ್ಮರಣೆಯನ್ನು ಅವರ ಒಡನಾಡಿ ಹಾಗೂ ರಜತರಂಗದ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಮಯ್ಯ ಬಜೆ ನಿರ್ವಹಿಸಿದರು. ರಜತರಂಗದ ಅಧ್ಯಕ ಡಾ. ಹರಿಕಿರಣ ಬಂಗೇರ, ದಾಮೋದರ ಮಯ್ಯ ಬಜೆ, ವೇದಮೂರ್ತಿ.ಗಣೇಶ ನಾವಡ, ಶ್ಯಾಮಲ ಮಯ್ಯ, ರಾಮಮೂರ್ತಿ ಕುದ್ರೆಕ್ಕೋಡ್ಲು, ಶಿವರಾಂಪ್ರಸಾದ್ ಮಯ್ಯ ಉಪಸ್ಥಿತರಿದ್ದರು. ಬಳಿಕ ಭಾಗವತರಾದ ತಲ್ಪಣಾಜೆ ವೆಂಕಟ್ರಮಣ ಭಟ್ ಮತ್ತು ರಂಜಿತ್ ಗೋಳಿಯಡ್ಕ ಇವರ ನಿರ್ದೇಶನದಲ್ಲಿ ಕೇಂದ್ರದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮೈರಾವಣ ಕಾಳಗ-ವಿಶ್ವರೂಪ ದರ್ಶನ ಆಖ್ಯಾನದ ಯಕ್ಷಗಾನ ಪ್ರದರ್ಶನ ನಡೆಯಿತು. ಜಯಪ್ರಕಾಶ ಮಯ್ಯ ಬಜೆ, ಶ್ರೀಧರ ಮಯ್ಯ ಬಜೆ ಸಹಕರಿಸಿದರು. ಜಯಶಂಕರ ಅಡಿಗ ಮಸ್ಕತ್ ಪ್ರಾಯೋಜಿಸಿದ್ದರು.

.jpg)
.jpg)
