HEALTH TIPS

ಇರಾನ್‌ ಮೇಲೆ ಅಮೆರಿಕ ಮತ್ತೆ ದಾಳಿ

ಬಾಗ್ದಾದ್/ ಕೈರೊ: ಅಲ್ಪ ದಿನಗಳ ಬಿಡುವಿನ ಬಳಿಕ ಅಮೆರಿಕ ಸೇನೆಯು ಇರಾನ್‌ನ ಗುರಿಗಳ ಮೇಲೆ ಹೊಸದಾಗಿ ದಾಳಿ ನಡೆಸಿದೆ. ಇರಾನ್‌ ಕೂಡಾ ಪ್ರತಿದಾಳಿ ನಡೆಸಿದ್ದು, ಪಶ್ಚಿಮ ಏಷ್ಯಾ ಸಂಘರ್ಷ ಮತ್ತೆ ಉಲ್ಬಣಗೊಂಡಿದೆ.


'ಇರಾನ್‌ ಮೇಲಿನ ಮತ್ತೊಂದು ಸುತ್ತಿನ ಭಾರಿ ವಾಯುದಾಳಿ ಯಶಸ್ವಿಯಾಗಿ ಪೂರ್ಣಗೊಂಡಿದೆ' ಎಂದು ಅಮೆರಿಕ ಸೇನೆ ಗುರುವಾರ ಬೆಳಿಗ್ಗೆ ತಿಳಿಸಿದೆ.

ಎರಡು ಗಂಟೆಗಳ ದಾಳಿಯಲ್ಲಿ ಇರಾನ್ ರೆವಲ್ಯೂಷನರಿ ಗಾರ್ಡ್‌ ಕೋರ್‌ನ (ಐಆರ್‌ಜಿಸಿ) ತಾಣಗಳು, ಮಿಲಿಟರಿ ಕಮಾಂಡ್‌ ಸೆಂಟರ್‌ ಮತ್ತು ಕ್ಷಿಪಣಿ ಹಾಗೂ ಡ್ರೋನ್‌ ಸೌಲಭ್ಯಗಳನ್ನು ಗುರಿಪಡಿಸಲಾಯಿತು ಎಂದು ಅಮೆರಿಕ ಸೇನೆಯ ಸೆಂಟ್ರಲ್‌ ಕಮಾಂಡ್‌ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.

ಜೋರ್ಡನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್‌, ಬುಧವಾರ ಕ್ಷಿಪಣಿ ದಾಳಿ ನಡೆಸಿತ್ತು. 'ಇರಾನ್‌ಗೆ ಭಾರಿ ಹೊಡೆತ ನೀಡುತ್ತೇವೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಸಿದ್ದರು. ಅದರ ಬೆನ್ನಲ್ಲೇ ಅಮೆರಿಕ ಸೇನೆಯಿಂದ ದಾಳಿ ನಡೆದಿದೆ.

ಹೊರ್ಮುಜ್‌ ಜಲಸಂಧಿಯಲ್ಲಿನ ಕ್ವೆಶ್ಮ್‌ ದ್ವೀಪದ ಮೇಲೆ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ವಾಯವ್ಯ ಭಾಗದ ಖುಜೆಸ್ತಾನ್ ಪ್ರಾಂತ್ಯದಲ್ಲಿ ಸ್ಫೋಟದ ಸದ್ದು ಕೇಳಿ ಬಂದಿದೆ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ವರದಿ ಮಾಡಿದೆ.

ನೌಕೆಗಳ ಮೇಲೆ ಡ್ರೋನ್ ದಾಳಿ: ಈಜಿಪ್ಟ್‌ನ ದಮಿಯೆಟಾ ಬಂದರಿನಲ್ಲಿ ನೈಸರ್ಗಿಕ ಅನಿಲ ಸಾಗಾಟದ ಎರಡು ನೌಕೆಗಳ ಮೇಲೆ ಡ್ರೋನ್‌ ದಾಳಿ ನಡೆದಿದ್ದು, ಬೆಂಕಿ ಕಾಣಿಸಿಕೊಂಡಿದೆ ಎಂದು ಬ್ರಿಟನ್‌ನ ಕಡಲ ಭದ್ರತಾ ಸಂಸ್ಥೆ 'ಆಂಬ್ರೆ' ತಿಳಿಸಿದೆ. ಅಮೆರಿಕ ಮತ್ತು ಗ್ರೀಕ್‌ ಒಡೆತನದ ನೌಕೆಗಳ ಮೇಲಿನ ದಾಳಿಗೆ ಯಾರು ಕಾರಣ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಸೌದಿ ಆರೋಪ: ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಬಂಡುಕೋರರು ಕಳೆದ ಕೆಲ ದಿನಗಳಲ್ಲಿ ತನ್ನ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂದು ಸೌದಿ ಆರೇಬಿಯಾ ಆರೋಪಿಸಿದೆ.

ಸೌದಿ ಅರೇಬಿಯಾದ ರಕ್ಷಣಾ ಸಚಿವ ಖಾಲಿದ್‌ ಬಿಲ್‌ ಸಲ್ಮಾನ್‌ ಅವರು ಬುಧವಾರ ಪ್ರತ್ಯೇಕವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries