HEALTH TIPS

'ಕರ್ನಾಟಕ-ಗಡಿನಾಡು ಕನ್ನಡ ಸಮ್ಮೇಳನ: ಯಶಸ್ಸಿಗಾಗಿ ಸಮಾಲೋಚನಾ ಸಭೆ

ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ಸೀತಮ್ಮಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತುಗ್ರಂಥಾಲಯ (ರಿ.), ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯಪರಿಷತ್ತು, ಕನ್ನಡ ಭವನ ಪ್ರಕಾಶನಹಾಗೂ ಕನ್ನಡಭವನ ಸಮೂಹ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಜು.26ರಂದು ನಡೆಯಲಿರುವ 'ಕರ್ನಾಟಕ-ಗಡಿನಾಡುಕನ್ನಡ ಸಮ್ಮೇಳನ'ಯಶಸ್ವಿಗೊಳಿಸುವ ನಿಟ್ಟಿನಲ್ಲಿ ¸ ಸಮಾಲೋಚನಾ ಸಭೆ ಕನ್ನಡಭವನ ಕೇಂದ್ರ ಕಛೇರಿಯಲ್ಲಿ ಜರುಗಿತು.


ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ಕೆ.ಎನ್. ವೆಂಕಟ್ರಮಣಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಮ್ಮೇಳನದ ಯಶಸ್ವಿಗೆ ವಿವಿಧಉಪ ಸಮಿತಿಗಳನ್ನು ರಚಿಸಲಾಯಿತು. ಮಾಜಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ಪಿ. ಸೋಮಶೇಖರ್ ಐ.ಎ.ಎಸ್. ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಕರ್ನಾಟಕದ ವಿವಿಧ ಕನ್ನಡಪರ ಸಂಘಟನೆಗಳು, ಕಲಾತಂಡಗಳನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಪ್ರದೀಪ್ ಬೇಕಲ್, ನವೀನ್‍ನಾಯ್ಕ ನಾಗರಕಟ್ಟೆ, ಲೋಕೇಶ್ ಶೆಟ್ಟಿ, ಶರತ್ ಅಣಂಗೂರು,ಜಗದೀಶ್ ಅಣಂಗೂರು, ಪ್ರಶಾಂತ್ ಎಲ್.ಐ.ಸಿ., ನಗರ ಸಭಾ ಸದಸ್ಯೆ ದಿವ್ಯಾ ಸಂದೀಪ್, ಕೌನ್ಸಿಲರ್ ಶ್ರುತಿ ವಿಕಾಸ್, ಜಯಂತ್ ಅಣಂಗೂರು,ಶಶಿಕಾಂತ್ ಶೆಟ್ಟಿ, ಸುಬ್ಬಣ್ಣ ರೈ, ದಿನೇಶ್ ಅಣಂಗೂರು ¸ಉಪಸ್ಥಿತರಿದ್ದರು. 

ಕನ್ನಡಭವನ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಸ್ವಾಗತಿಸಿದರು. ಪ್ರದೀಪ್‍ಬೇಕಲ್ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾರಾಣಿ ಟೀಚರ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries