HEALTH TIPS

ಮಾದಕ ದ್ರವ್ಯಜಾಲವನ್ನು ಮಟ್ಟಹಾಕಲು ಸರ್ಕಾರ ಬದ್ಧ: ಆಪರೇಷನ್ ತುಫಾನ್ ಜನ ಜಾಗೃತಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಗೃಹಸಚಿವ ರಮೇಶ್ ಚೆನ್ನಿತ್ತಲ ಹೇಳಿಕೆ

ಕಾಸರಗೋಡು: ಮಾದಕದ್ರವ್ಯ ಪೂರೈಸುವ ಮೂಲಕ ಸಾಮಾಜಿಕ ಆರೋಗ್ಯ ಕೆಡಿಸುವವರನ್ನು ಪತ್ತೆಹಚ್ಚಿ ಅವರನ್ನು ದಮನಿಸುವ ಮೂಲಕ ಮನುಷ್ಯರನ್ನು ಸಾವಿನ ದವಡೆಯಿಂದ ಪಾರುಮಡುವ ಕರ್ತವ್ಯ ನಮ್ಮೆಲ್ಲರದಾಗಬೇಕು ಎಂದು ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. 


ಅವರು ಕಾಸರಗೋಡು ವಿದ್ಯಾನಗರದ ತನ್‍ಬೀಹುಲ್ ಇಸ್ಲಾಂ ಹಯರ್‍ಸೆಕೆಂಡರಿ ಶಾಲೆಯಲ್ಲಿ ಸೋಮವಾರ ನಡೆದ ಆಪರೇಷನ್ ತುಫಾನ್ ಜನ ಜಾಗೃತಿ ಸಮಾರಂಭದ ಜಿಲ್ಲಾಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 

ಜನರನ್ನು ಮಾದಕ ದ್ರವ್ಯದ ದಾಸರನ್ನಾಗಿಸಿ,  ತಾವು ಆಡಂಬರ ಜೀವನ ನಡೆಸುತ್ತಿರುವ ಸಾವಿನ ವ್ಯಾಪಾರಿಗಳನ್ನು ಪತ್ತೆಹಚ್ಚಿ, ಇವರ ವಿರುದ್ಧ ನಡೆಸುವ ಕಾರ್ಯಚರಣೆಗೆ ಸಮಾಜದ ಜನತೆ ಕೈಜೋಡಿಸಬೇಕು. ಇದಕ್ಕಾಗಿ ಇಡೀ ಸಮಾಜವೇ ಆಪರೇಷನ್ ತುಫಾನ್ ವಾರಿಯರ್ಸ್ ಆಗಬೇಕಾಗಿದೆ. ಮಾದಕ ದ್ರವ್ಯ ಮಾಫಿಯಾಗಳನ್ನು ಮಟ್ಟಹಾಕುವ ಕಾರ್ಯಾಚರಣೆ ನಿಂತರ ಪ್ರಕ್ರಿಯೆಯಾಗಬೇಕು ಎಂದು ತಿಳಿಸಿದರು. 

ಮಾದಕ ದ್ರವ್ಯ ದಂಧೆ  ಯುವ ಪೀಳಿಗೆಯನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದು, ಹಲವು ಮಂದಿ ಅಮ್ಮಂದಿರ ಕಣ್ಣೀರಲ್ಲಿ ಕೈತೊಳೆಯುತ್ತಿರುವುದಲ್ಲದೆ ಕುಟುಂಬ ಬೀದಿಪಾಲಾಗುತ್ತಿದೆ.  ಈ ನಿಟ್ಟಿನಲ್ಲಿ ಆರಂಭಿಸಿದ ಆಪರೇಷನ್ ತುಫಾನ್ ಅತ್ಯಂತ ಯಶಸ್ವಿಯಾಗಿದೆ. ಇದಕ್ಕೆ ಅಮ್ಮಂದಿರು ನೀಡಿದ ಬೆಂಬಲ ಮತ್ತು ಪೆÇೀಲೀಸ್ ಉದ್ಯೋಗಿಗಳಿತ್ತ ಸಹಕಾರ ಕಾರಣವಾಗಿದೆ.  ಆಪರೇಷನ್ ತೂಫಾನ್ ಮೂಲಕ ಮಾದಕದ್ರವ್ಯ ದಂಧೆಯನ್ನು ಮೂಲೋತ್ಪಾಟನೆ ಮಾಡಲು ಸರ್ಕಾರ ಬದ್ಧವಾಗಿದೆ.  ಕಾಸರಗೋಡು ಜಿಲ್ಲೆ ಕರ್ನಾಟಕದೊಂದಿಗೆ ಹೆಚ್ಚಿನ ಪ್ರದೇಶದಲ್ಲಿ ಗಡಿ ಹಂಚಿಕೊಳ್ಳುತ್ತಿರುವುದರಿಂದ ಕರ್ನಾಟಕ ಪೆÇೀಲೀಸ್ ಸಹಕಾರದೊಂದಿಗೆ ತಲಪ್ಪಾಡಿ ಸೇರಿದಂತೆ ಜಿಲ್ಲೆಯ ವಿವಿಧ ಗಡಿಯಲ್ಲಿ ಕಣ್ಗಾವಲಿರಿಸಲಾಗಿದೆ. ಈ ನಿಟ್ಟಿನಲ್ಲಿ ತಾನು ಕರ್ನಾಟಕ ಸಿಎಂ ಜತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು. 

ಈ ಸಂದರ್ಭ  ಮಾದಕ ದ್ರವ್ಯ ಸೇವನೆ ವಿರುದ್ಧ ಪ್ರತಿಜ್ಞೆ ಬೋಧಿಸಲಾಯಿತು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಪ್ರತಿಜ್ಞೆ ಭೋಧಿಸಿದರು. ಕಾಸರಗೋಡು ಶಾಸಕ ಕಲ್ಲಟ್ರ ಮಹಿನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇೀಲೀಸ್ ಇಲಾಖೆ ಕಾರ್ಯಕ್ರಮ ಆಯೋಜಿಸಿತ್ತು.  ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ ನಿತಿನ್ ರಾಜ್ ಐಪಿಎಸ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್, ಡಿಐಜಿ ಕಾರ್ತಿಕ್ ಐಪಿಎಸ್,  ಶಾಸಕರಾದ ಎಕೆಎಂ ಅಶ್ರಫ್, ಕೆ ನೀಲಕಂಠನ್, ಗೋವಿಂದನ್ ಪಳ್ಳಿಕಾಪಿಲ್, ಸಂದೀಪ್ ವಾರಿಯರ್, ಜಿ. ಪಂ. ಅಧ್ಯಕ್ಷ ಸಾಬು ಅಬ್ರಹಾಂ, ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅಬ್ದುಲ್ಲಕುಞÂ ಚೆರ್ಕಳ, ಚೆಂಗಳ ಗ್ರಾ. ಪಂ. ಅಧ್ಯಕ್ಷ ವಸಂತ್ ಅಜಕೋಡು ಮೊದಲಾದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries