HEALTH TIPS

ಪಿಎಫ್ ಪಿಂಚಣಿದಾರರ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ

ಕಾಸರಗೋಡು: ಪಿಎಫ್ ಚಂದಾದಾರರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು ಪ್ರಸ್ತುತ ಅತ್ಯಲ್ಪ ಪಿಂಚಣಿ ಮೊತ್ತವನ್ನು ಪಡೆಯುತ್ತಿದ್ದು,  ಪ್ರಸಕ್ತ ಸನ್ನಿವೇಶಕ್ಕೆ ಅನುಗುಣವಾಗಿ ಅಸ್ತಿತ್ವದಲ್ಲಿರುವ ಪಿಂಚಣಿ ಯೋಜನೆಯನ್ನು ಪರಿಷ್ಕರಿಸುವಂತೆ ಪಿಎಫ್ ಪಿಂಚಣಿದಾರರ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದೆ. 


ಚೆರ್ಕಳದ ಸದ್ಭಾವನಾ ಸಭಾಂಗಣದಲ್ಲಿ ನಡೆದ ಸಮ್ಮೇಳನವನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಇ. ಪದ್ಮಾವತಿ  ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ವಿ. ಕುಞಂಬಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿ.ಕಾರ್ಯಂಬು ವರದಿ,  ಜಿಲ್ಲಾ ಕೋಶಾಧಿಕಾರಿ ಎಂ.ರಾಮನ್ ಲೆಕ್ಕಪತ್ರ ಹಾಗೂ  ರಾಜ್ಯ ಸಮಿತಿ ಸದಸ್ಯ ಟಿ.ಕೆ. ದಿವಾಕರನ್ ಕನ್ನಪುರಂ ಸಂಘಟನಾ ವರದಿ ಮಂಡಿಸಿದರು. 

ಪಿ.ಕಮಲಾಕ್ಷನ್, ಗಿರಿಕೃಷ್ಣನ್, ಪಿ.ಶಿವಪ್ರಸಾದ್, ಎ.ನಾರಾಯಣನ್, ಬಿ.ಕೆ. ಮನೋಹರನ್, ಕೆ.ವಿ. ಬಾಲರಾಜನ್, ಕೆ.ಎನ್. ಪ್ರಭಾಕರನ್, ಮತ್ತು ಪಿ.ನಾರಾಯಣನ್ ಉಪಸ್ಥಿತರಿದ್ದರು.  ಸ್ವಾಗತ ಸಮಿತಿ ಅಧ್ಯಕ್ಷ ಎ.ಆರ್. ಧನ್ಯವಾದ್ ಸ್ವಾಗತಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕೆ.ವಿ ಕುಞಂಬಾಡಿ ಅಧ್ಯಕ್ಷ, ಪಿ. ಕಾರ್ಯಂಬು ಕಾರ್ಯದರ್ಶಿ ಹಾಗೂ ಎಂ. ರಆಮನ್ ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries