HEALTH TIPS

ಅಪಾಯಕಾರಿ ರೀತಿಯಲ್ಲಿ ಸಂಚರಿಸಿದ ಥಾರ್‍ಜೀಪು ತಡೆದು ನಿಲ್ಲಿಸಿದ ನಾಗರಿಕರು: ಮದ್ಯದಮಲಿನಲ್ಲಿದ್ದ ಚಾಲಕ ಕಸ್ಟಡಿಗೆ

ಕಾಸರಗೋಡು: ಮದ್ಯದ ಅಮಲಿನಲ್ಲಿ ಅಪಾಯಕರ ರೀತಿಯಲ್ಲಿ ಥಾರ್‍ಜೀಪು  ಚಲಾಯಿಸಿದ ವ್ಯಕ್ತಿಯನ್ನು ಪೋಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ತಮಿಳುನಾಡಿನ ಧರ್ಮಪುರಿ ನಿವಾಸಿ ಬಿ. ಶ್ಯಾಮ್‍ರಾಜ್ (55) ಎಂಬಾತ ಪೋಲೀಸ್ ಕಸ್ಟಡಿಯಲ್ಲಿರುವ ವ್ಯಕ್ತಿ.  ಎದ್ದು ನಿಲ್ಲಲು ಕೂಡಾ ಸಾಧ್ಯವಾಗದ ರೀತಿಯಲ್ಲಿ ಈತ ಮದ್ಯದಮಲಿನಲ್ಲಿದ್ದನು. ಬುಧವಾರ ಸಂಜೆ ಈತ ಅಪರಿಮಿತ ವೇಗದಲ್ಲಿ ಜೀಪು ಚಲಾಯಿಸಿ ಠಳಾಯಿಸಿದ್ದ. ಜೀಪಿನ ಒಂದು ಟಯರ್ ಹಾನಿಗೀಡಾದ ಸ್ಥಿತಿಯಲ್ಲಿತ್ತು. ಇದು ಗಮನಕ್ಕೆ ಬಂದ ನಾಗರಿಕರು ಪರಪ್ಪ ಶಾಲೆ ಸಮೀಪ ಜೀಪನ್ನು ತಡೆದು ನಿಲ್ಲಿಸಿದರು. ಬಳಿಕ ನಾಗರಿಕರು ನೀಡಿದ ಮಾಹಿತಿಯಂತೆ ವೆಳ್ಳರಿಕುಂಡ್ ಪೋಲೀಸರು ಸ್ಥಳಕ್ಕೆ ತಲುಪಿದ್ದರು. ಜೀಪಿನಿಂದ ಹೊರಗಿಳಿದ ತಕ್ಷಣ ಚಾಲಕ ರಸ್ತೆಯಲ್ಲಿ ಕುಸಿದುಬಿದ್ದನು. ಮದ್ಯದಮಲಿನಲ್ಲಿದ್ದುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈತನನ್ನು ಕಸ್ಟಡಿಗೆ ತೆಗೆಯಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries