HEALTH TIPS

16 ರಿಂದ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟದ (ಸಿಐಟಿಯು) ರಾಜ್ಯ ಸಮ್ಮೇಳನ

ಕಾಸರಗೋಡು: ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟದ (ಸಿಐಟಿಯು) ರಾಜ್ಯ ಸಮ್ಮೇಳನ ಆಗಸ್ಟ್ 16 ಮತ್ತು 17 ರಂದು ಕಾಸರಗೋಡಿನ ಕೋಟೆಕಣಿ ಜೀವಾಸ್ ಮಾನಸ ಸಭಾಂಗಣದಲ್ಲಿ ವಿಶೇಷವಾಗಿ ಸಜ್ಜುಗೊಳಿಸಲಾದ 'ಕಾಮ್ರೇಡ್ ಶೀಲಾ ಅಲೆಕ್ಸ್ - ಕಾಮ್ರೇಡ್ ಕೆ. ಬಾಲಕೃಷ್ಣನ್ ನಗರದಲ್ಲಿ ಜರಗಲಿರುವುದಾಗಿ ಕಾರ್ಯಕ್ರಮದ ಪ್ರಧಾನ ಸಂಚಾಲಕ ಪಿ. ಮಣಿಮೋಹನ್‍ಪಿ.ಮಣಿಮೋಹನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ರಾಜ್ಯದ 14 ಜಿಲ್ಲೆಗಳಿಂದ ಒಟ್ಟು 419 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎಳಮರ ಕರೀಮ್ ಅವರು ಸಮ್ಮೇಳನ ಉದ್ಘಾಟಿಸುವರು. ಈ ಸಮ್ಮೇಳನದಲ್ಲಿ ಅಧ್ಯಕ್ಷ ಸಾಯಿ ಬಾಬು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯು.ಪಿ. ಜೋಸೆಫ್, ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹಂತೇಶ್, ತಮಿಳುನಾಡು ರಾಜ್ಯ ಕಾರ್ಯದರ್ಶಿ ಕುಮಾರ್ ಹಾಗೂ ಸಿಐಟಿಯು ರಾಜ್ಯ ಕಾರ್ಯದರ್ಶಿಗಳಾದ ಟಿ.ಕೆ. ರಾಜನ್ ಮತ್ತು ಕೆ. ಮನೋಹರನ್ ಭಾಗವಹಿಸಲಿದ್ದಾರೆ.

ಟಿ.ಕೆ. ರಾಜನ್ ಅಧ್ಯಕ್ಷ ಮತ್ತು ಪಿ. ಮಣಿಮೋಹನ್‍ಪ್ರಧಾನ ಸಂಚಾಲಕರಾಗಿರುವ ಸಂಘಟನಾ ಸಮಿತಿ ರಚಿಸಲಾಗಿದೆ. 

ನಿರ್ಮಾಣ ಕಾರ್ಮಿಕರ ಒಕ್ಕೂಟ ಸಿಐಟಿಯು ಸಂಘಟನೆ ರಾಜ್ಯದಲ್ಲಿ ಆರು ಲಕ್ಷ ಸದಸ್ಯರನ್ನು ಹೊಂದಿದೆ. ಕಲ್ಯಾಣ ನಿಧಿಯ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ವಿಫಲವಾಗಿರುವುದು, ಸುಮಾರು ನಾಲ್ಕು ಲಕ್ಷ ಪಿಂಚಣಿದಾರರಿಗೆ ಪಿಂಚಣಿ ಬಾಕಿಯನ್ನು ಪಾವತಿಸದಿರುವುದು ಮತ್ತು ನಿರ್ಮಾಣ ವಲಯದಲ್ಲಿನ ಸಮಸ್ಯೆಗೆ ಕಾರಣವಾಗಿದ್ದು,  ಈ ಬಗ್ಗೆ ಸಮ್ಮೇಳನ ಚರ್ಚೆ ನಡೆಸಲಿರುವುದಾಗಿ ತಿಳಿಸಿದರು.

ಸಮ್ಮೇಳನದ ಅಂಗವಾಗಿ, ಜಿಲ್ಲೆಯಾದ್ಯಂತ ವಿವಿಧ ವಿಷಯಗಳ ಕುರಿತು ಐದು ವಿಚಾರ ಸಂಕಿರಣ ಹಾಗೂ ಆಗಸ್ಟ್ 10 ರಂದು 'ಧ್ವಜ ದಿನ'ವನ್ನು ಆಚರಿಸಲಾಗಿದೆ.  ಆಗಸ್ಟ್ 14 ರಂದು ಸಂಜೆ 4ಕ್ಕೆ ಪ್ರೆಸ್ ಕ್ಲಬ್ ಜಂಕ್ಷನ್ ಕೇಂದ್ರವಾಗಿಟ್ಟುಕೊಂಡು ಡಂಗುರ ಜಾಥಾ ನಡೆಯಲಿರುವುದಾಗಿ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಪದಾಧಿಕರಿಗಳಾದ ಟಿ.ಎಂ.ಎ. ಕರೀಂ,  ಟಿ.ನಾರಾಯಣ್,  ಎ.ಆರ್. ದನ್ಯವಾದ್, ಕೆ.ರವೀಂದ್ರನ್ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries