ಕಾಸರಗೋಡು: ಮೊಗ್ರಾಲ್ಪುತ್ತೂರು ಗ್ರಾಮ ಪಂಚಾಯಿತಿ ವ್ಯಪ್ತಿಯಲ್ಲಿ ಶೌಚಗೃಹದ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಸುರಿಯಲು ತಲುಪಿದ ವಾಹನಕ್ಕೆ ನಾಗರಿಕರು ತಡೆಯೊಡ್ಡಿ, ನಂತರ ವಾಹನವನ್ನು ಪೆÇಲೀಸರಿಗೆ ಹಸ್ತಾಂತರಿಸಿದ್ದಾರೆ. ನಂತರ ಗ್ರಾಮ ಪಂಚಾಐಇತಿ ಅಧಿಕಾರಿಗಳು ವಾಹನದ ಮಾಲಿಕಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಮೊಗ್ರಾಲ್ ಪುತ್ತೂರು ಆಜಾದ್ ನಗರದಲ್ಲಿ ಟ್ಯಾಂಕರ್ ಮೂಲಕ ತಂದು ಶ್ಛಗೃಹದ ತ್ಯಾಜ್ಯ ಸುರಿಯಲೆತ್ನಿಸುತ್ತಿರುವಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಈ ಬಗ್ಗೆ ನಿಗಾ ವಹಿಸುತ್ತಿದ್ದಂತೆ ಆಗಮಿಸಿದ ಟ್ಯಾಂಕರಿಂದ ತ್ಯಾಜ್ಯ ಹೊರಕ್ಕೆ ಸುರಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ವಾಹನಕ್ಕೆ ತಡೆಯೊಡ್ಡಿ ಕಾಸರಗೋಡು ನಗರಠಾಣೆ ಪೆÇಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಸ್ಥಳಕ್ಕೆ ತಲುಪಿದ ಪೆÇಲೀಸರು ವಾಹನವನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಳಿಕ ಪೆÇಲೀಸರು ನೀಡಿದ ಮಾಹಿತಿಯಂತೆ ಮೊಗ್ರಾಲ್ ಪುತ್ತೂರು ಪಂಚಾಯತ್ ಅಧಿಕಾರಿಗಳು ಟ್ಯಾಂಕರ್ ಲಾರಿಯ ಆರ್.ಸಿ ಮಾಲಕನಿಗೆ ದಂಡ ವಿಧಿಸಿದ್ದಾರೆ.

