HEALTH TIPS

ರೈಲಿನಲ್ಲಿ ಕಳವು-ಆರೋಪಿಯ ತಾಸುಗಳೊಳಗೆ ಬಂಧಿಸಿದ ರೈಲ್ವೆ ಪೊಲೀಸರು

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಕನ ಪಾಸ್‍ಪೆÇೀರ್ಟ್, ಮೊಬೈಲ್ ಫೆÇೀನ್ ಇತ್ಯಾದಿ ಸಾಮಗ್ರಿಗಳನ್ನು ಕಳವುಗೈದ ಆರೋಪಿಯನ್ನು ಘಟನೆ ನಡೆದ 24 ತಾಸುಗಳೊಳಗಾಗಿ ಬಂಧಿಸುವಲ್ಲಿ ಕಾಸರಗೋಡು ರೈಲ್ವೇ ಪೆÇಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ ನಿವಾಸಿ ಬರೇಂದ್ರ ರಾವೂತ್ತರ್ (37) ಬಂಧಿತ. ಕಾಸರಗೋಡು ರೈಲ್ವೇ ಪೆÇಲೀಸ್ ಠಾಣೆಯ ಎಸ್.ಐ. ಸನಿಲ್ ಕುಮಾರ್ ನೇತೃತ್ವದ ಪೆÇಲೀಸರ ತಂಡ ಈತನನ್ನು ಬಂಧಿಸಿದೆ.

ಮಂಗಳೂರಿನಿಂದ ಕಾಸರಗೋಡಿನತ್ತ ಆಗಮಿಸುತ್ತಿದ್ದ ಮಂಗಳ ಲಕ್ಷದ್ವೀಪ ಎಕ್ಸ್‍ಪ್ರೆಸ್ ರೈಲು ಗಾಡಿಯಲ್ಲಿ ರಾತ್ರಿ ವೇಳೆ ಈ ಕಳವು ನಡೆದಿದೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಮಲಪ್ಪುರಂ ಇರುಂಬುಳ ವಡಕಕೇಮುರಿ ರಹಮಾನ್ ಎಂಬವರ ದಕ್ಷಿಣಮರಿಯ ಪಿ. ಸಂತೋಷ್ ರಾಥೋಡ್ ಎಂಬವರ 89000 ರೂ. ಮೌಲ್ಯದ ಐಪ್ಯಾಡ್, ಮೊಬೈಲ್ ಫೋನ್, ಪಾಸ್‍ಪೆÇೀರ್ಟ್, ಪವರ್ ಬ್ಯಾಂಕ್ ಇತ್ಯಾದಿ ಒಳಗೊಂಡ ಬ್ಯಾಗನ್ನು ರಾತ್ರಿ ವೇಳೆ ಕಳವುಗೈಯಲಾಗಿತ್ತು. ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ತಲುಪಿದಾಗಲಷ್ಟೇ ಕಳವು ಬೆಳಕಿಗೆ ಬಂದಿದ್ದು, ತಕ್ಷಣ ಕಾಸರಗೋಡು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿ, ಕಾಸರಗೋಡು ಹೊಸ ಬಸ್ ನಿದಾಣ ವಠಾರದಿಂದ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 

ಸೀನಿಯರ್ ಸಿವಿಲ್ ಪೆÇಲೀಸ್ ಆಫೀಸರ್ ಕೃಷ್ಣೇಶ್, ರೈಲ್ವೇ ಭದ್ರತಾ ಪಡೆ (ಆರ್‍ಪಿಎಫ್) ಅಬ್ದುಲ್ ಸತ್ತಾರ್ ಎಂಬವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries