HEALTH TIPS

ಕಾಮನ್‌ವೆಲ್ತ್ ಗೇಮ್ಸ್‌ | ಬಾಕ್ಸಿಂಗ್: ಪ್ರೀತಿ ಪವಾರ್, ಅಂಕುಶ್ ಫೈನಲ್‌ಗೆ

ಗ್ಲಾಸ್ಗೊ: ಕಾಮನ್‌ವೆಲ್ತ್ ಗೇಮ್ಸ್‌ನ ನಿರ್ಣಾಯಕ ಸೆಮಿ ಫೈನಲ್‌ನಲ್ಲಿ ಭಾರತದ ಬಾಕ್ಸಿಂಗ್ ತಂಡವು ಕನಸಿನ ಅರಂಭ ಪಡೆದಿದೆ. ಪ್ರೀತಿ ಪವಾರ್ ಹಾಗೂ ಅಂಕುಶ್ ಪಾಂಘಾಲ್ ಅವರು ತಮ್ಮ ತೂಕ ವಿಭಾಗಗಳಲ್ಲಿ ಸುಲಭ ಜಯ ಗಳಿಸಿ ಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ವಿಶ್ವಾಸ ಹೆಚ್ಚಿಸಿದ್ದಾರೆ.


ಈ ಇಬ್ಬರ ಗೆಲುವಿನೊಂದಿಗೆ ಭಾರತವು ಬಾಕ್ಸಿಂಗ್ ಸೆಮಿ ಫೈನಲ್‌ನಲ್ಲಿ 2-0 ಪರಿಪೂರ್ಣ ದಾಖಲೆ ನಿರ್ಮಿಸಿದೆ. ಇನ್ನೂ ಎಂಟು ಬಾಕ್ಸರ್‌ಗಳು ಸೆಮಿ ಫೈನಲ್‌ನಲ್ಲಿ ಸೆಣಸಾಡಲು ಸಜ್ಜಾಗಿದ್ದಾರೆ. ಈ ಗೆಲುವಿನ ಮೂಲಕ ಭಾರತವು ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದೆ. ಉಭಯ ಬಾಕ್ಸರ್‌ಗಳು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದರಿಂದ ಒಂದು ಹೆಜ್ಜೆ ಹಿಂದಿದ್ದಾರೆ.

ಶುಕ್ರವಾರ ಏಕಪಕ್ಷೀಯವಾಗಿ ನಡೆದ ಮಹಿಳೆಯರ 54 ಕೆಜಿ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ವಿಶ್ವದ ನಂ.3ನೇ ಆಟಗಾರ್ತಿ ಪ್ರೀತಿ ಪವಾರ್ ಅವರು ಝಾಂಬಿಯಾದ ಕ್ಯಾಥರಿನ್ ಎಂವಾಪೆ ಅವರನ್ನು 5-0 ಅಂತರದಿಂದ ಸುಲಭವಾಗಿ ಸೋಲಿಸಿದರು.

ಪ್ರೀತಿ 5-0 ಅಂತರದಿಂದ ಗೆಲ್ಲುವ ಮೊದಲು ಆರಂಭಿಕ ಸುತ್ತಿನಲ್ಲಿ ಪ್ರಾಬಲ್ಯ ಮೆರೆದರು.ಪ್ರೀತಿ ಎರಡನೇ ಸುತ್ತಿನಲ್ಲೂ ತನ್ನ ಹಿಡಿತ ಬಿಗಿಗೊಳಿಸಿದರು.

ಅಂಡರ್-22 ಹಾಗೂ ಎಲೈಟ್ ಮಟ್ಟದಲ್ಲಿ ಪ್ರೀತಿ ಅವರು ಎರಡು ಬಾರಿಯ ಏಶ್ಯನ್ ಚಾಂಪಿಯನ್ ಆಗಿದ್ದಾರೆ.

ಈ ವರ್ಷ ವಿಶ್ವಕಪ್ ಹಾಗೂ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಪ್ರೀತಿ ಫೈನಲ್ ಸ್ಪರ್ಧೆಯಲ್ಲಿ ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೊರನ್ನು ಎದುರಿಸಲಿದ್ದಾರೆ.

ಅಂಕುಶ್ ಫೈನಲ್‌ಗೆ: ಆಲ್‌ರೌಂಡ್ ಪ್ರದರ್ಶನ ನೀಡಿದ ಅಂಕುಶ್ ಪಾಂಘಾಲ್ ಪುರುಷರ 80 ಕೆಜಿ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಕೆನಡಾದ ಜೊಶುವಾ ಒಫೊರಿ ಅವರನ್ನು 5-0 ಅಂತರದಿಂದ ಮಣಿಸಿದರು. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಂಕುಶ್ ಅವರು ಫೈನಲ್‌ಗೆ ಪ್ರವೇಶಿಸಿದರು.

ಜಾಡ್ ಮಿಕೋಕ್‌ರನ್ನು ಮಣಿಸಿ ಅಂತಿಮ-4ರ ಸುತ್ತು ಪ್ರವೇಶಿಸಿದ್ದ ಅಂಕುಶ್ ಹೆಚ್ಚು ಸಮಯ ವ್ಯರ್ಥ ಮಾಡದೆ ತನ್ನ ಶಕ್ತಿಯನ್ನು ಪ್ರದರ್ಶಿಸಿದರು. ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿದ ಅಂಕುಶ್ ಎದುರಾಳಿಯನ್ನು 5-0 ಅಂತರದಿಂದ ಸುಲಭವಾಗಿ ಸೋಲಿಸಿದರು.

4-400 ಮೀ. ಮಿಕ್ಸೆಡ್ ರಿಲೇ: ಭಾರತ ಫೈನಲ್‌ಗೆ ಅರ್ಹತೆ

ವಿಶಾಲ್ ಟಿ.ಕೆ, ರಾಜೇಶ್ ರಮೇಶ್, ರಾಶ್‌ದೀಪ್ ಕೌರ್ ಹಾಗೂ ನೀರೂ ಪಾಠಕ್ ಅವರನ್ನೊಳಗೊಂಡ ಭಾರತದ ಪುರುಷರ 4-400 ಮೀ. ರಿಲೇ ತಂಡವು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದೆ.

ಶುಕ್ರವಾರ 3:20.98 ಸೆಕೆಂಡ್‌ನಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದ ಭಾರತದ 4-400 ಮೀ. ರಿಲೇ ತಂಡವು ಹೀಟ್-2ರಿಂದ ಸ್ವಯಂ ಆಗಿ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದೆ. ಆದರೆ, ಸ್ವಯಂ ಆಗಿ ಅರ್ಹತೆ ಪಡೆಯದ ವೇಗವಾಗಿ ಗುರಿ ತಲುಪಿದ ತಂಡಗಳ ಪೈಕಿ ಒಂದಾಗಿ ಫೈನಲ್‌ಗೆ ಪ್ರವೇಶಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries