ನವದೆಹಲಿ: ವಿದೇಶದಲ್ಲಿ ಏಕತೆ ಬಗ್ಗೆ ಮಾತನಾಡುವವರು ಇಲ್ಲಿ ಧರ್ಮಗಳ ನಡುವೆ ಬಿರುಕು ಬಿದ್ದಾಗ ಮೌನವಹಿಸುವುದೇಕೆ? ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ದೇಶದ ಏಕತೆಗೆ ಸಂಬಂಧಿಸಿದಂತೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಕುರಿತು ಕಪಿಲ್ ಸಿಬಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ನ್ಯೂಯಾರ್ಕ್ನ ಐಕಾನಿಕ್ ಸಿಟಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿರುವ ಇನ್ಫೋಸಿಸ್ ಸಭಾಂಗಣದಲ್ಲಿ ನಡೆದ ಆರ್ಎಸ್ಎಸ್ ಶತಮಾನೋತ್ಸವದ ಜಾಗತಿಕ ಸಂಪರ್ಕ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರು, 'ಭಾರತದಲ್ಲಿ ಮುಸ್ಲಿಮರೇ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲ. ಇಲ್ಲಿ ವಾಸಿಸುವ ಹಕ್ಕು ಎಲ್ಲ ಸಮುದಾಯದವರಿಗೂ ಇದೆ' ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ಸಿಬಲ್, 'ವಿವಿಧತೆಯಲ್ಲಿ ಏಕತೆ ಬಗ್ಗೆ ವಿದೇಶದಲ್ಲಿ ಮಾತನಾಡುವರು ಇಲ್ಲಿಯೂ ಅದನ್ನು ಅನುಸರಿಬೇಕು. ಅಲ್ಲಿ ಬುದ್ಧಿವಂತಿಯ ಹೇಳಿಕೆ ನೀಡುವವರು ಇಲ್ಲಿ ಧರ್ಮಗಳ ನಡುವೆ ಬಿರುಕು ಬಂದಾಗ ಮೌನವಹಿಸುವುದೇಕೆ? ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
'ಏಕತೆ ಬಗ್ಗೆ ವಿದೇಶದಲ್ಲಿನ ಹೇಳಿಕೆಗಳು ಜಾರಿಯಾಗಬೇಕು. ಹಿಂದೂಗಳನಷ್ಟೆ ಅಲ್ಲದೆ ಪ್ರತಿಯೊಬ್ಬರನ್ನು ಗೌರವಿಸಬೇಕು. ಮಾತು ಮುಖ್ಯವಲ್ಲ. ಕೆಲಸಗಳು ಮಾತನಾಡಬೇಕು'ಎಂದಿದ್ದಾರೆ.
ನ್ಯೂಯಾರ್ಕ್ನ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರು 'ವಿವಿಧತೆಯಲ್ಲಿ ಏಕತೆ ಬಗ್ಗೆ ಮಾತನಾಡಿ ಸಭಿಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

