HEALTH TIPS

ಪ್ರಧಾನಿ ಮೋದಿ ಉಜ್ಬೇಕಿಸ್ತಾನ ಪ್ರವಾಸ | ದ್ವಿಪಕ್ಷೀಯ ಸಂಬಂಧ ಬಲಪಡಿಸುವ ಕುರಿತು ಮಾತುಕತೆ

ತಾಷ್ಕೆಂಟ್: ಭಾರತ ಮತ್ತು ಉಜ್ಬೇಕಿಸ್ತಾನ ರವಿವಾರ ತಮ್ಮ ರಾಜತಾಂತ್ರಿಕ ಸಂಬಂಧವನ್ನು 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ'ಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಿದ್ದು, 2030ರ ವೇಳೆಗೆ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು ಐದು ಶತಕೋಟಿ ಡಾಲರ್‌ಗೆ ತಲುಪಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಿವೆ.


ಪ್ರಧಾನಿ ನರೇಂದ್ರ ಮೋದಿ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷ ಶೌಕತ್ ಮಿರ್ಜಿಯೋಯೆವ್ ತಮ್ಮ ಮಾತುಕತೆ ವೇಳೆ ಪ್ರಮುಖ ವ್ಯಹಾತ್ಮಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಬಲಗೊಳಿಸಲು ಒಪ್ಪಿಕೊಂಡರು.

ಇದೇ ವೇಳೆ ಉಜ್ಬೇಕಿಸ್ತಾನದಿಂದ ಭಾರತಕ್ಕೆ ದೀರ್ಘಕಾಲಿಕ ಯುರೇನಿಯಂ ಸರಬರಾಜಿಗೆ ಒಂದು ಹೊಸ ಚೌಕಟ್ಟನ್ನು ರೂಪಿಸಲು ಉಭಯ ನಾಯಕರು ಒಪ್ಪಂದಕ್ಕೆ ಬಂದಿದ್ದಾರೆ. ಇದು ಉದಯೋನ್ಮುಖ ದ್ವಿಪಕ್ಷೀಯ ಪಾಲುದಾರಿಕೆಗೆ ಮಹತ್ವದ ಇಂಧನ ಆಯಾಮವನ್ನು ಸೇರಿಸಿದೆ.

ಸದ್ಯ ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ವ್ಯಾಪಾರವು ಒಂದು ಶತಕೋಟಿ ಡಾಲರ್‌ಗಿಂತ ಅಧಿಕವಿದ್ದು, ಹೊಸ ಗುರಿಯು ಆರ್ಥಿಕ ಸಂಬಂಧಗಳ ಗಣನೀಯ ವಿಸ್ತರಣೆಯನ್ನು ಸೂಚಿಸುತ್ತದೆ.

ಮೋದಿ ಮತ್ತು ಮಿರ್ಜಿಯೋಯೆವ್ ನಡುವಿನ ಮಾತುಕತೆಗಳು ವ್ಯಾಪಾರ, ಹೂಡಿಕೆ, ಮೂಲಸೌಕರ್ಯ, ನಿರ್ಣಾಯಕ ಖನಿಜಗಳು, ಗಣಿಗಾರಿಕೆ, ರಕ್ಷಣೆ ಮತ್ತು ಭದ್ರತೆ, ಕೃಷಿ, ಔಷಧಿ, ಆರೋಗ್ಯ, ಮಾಹಿತಿ ತಂತ್ರಜ್ಞಾನ, ಯುಪಿಐ ಸೇರಿದಂತೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವುದನ್ನು ಕೇಂದ್ರೀಕರಿಸಿದ್ದವು.

ಗಣಿಗಾರಿಕೆ, ಸಂಸ್ಕೃತಿ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಆಯುರ್ವೇದ ಕ್ಷೇತ್ರಗಳನ್ನು ಒಳಗೊಂಡಂತೆ ಹಲವು ಪ್ರಮುಖ ಒಪ್ಪಂದಗಳನ್ನು ಈ ಸಂದರ್ಭದಲ್ಲಿ ವಿನಿಮಯಿಸಿಕೊಳ್ಳಲಾಯಿತು.

ಉಜ್ಬೇಕಿಸ್ತಾನ್ ಮಧ್ಯ ಏಷ್ಯಾದ ಹೃದಯಭಾಗದಲ್ಲಿದೆ ಮತ್ತು ಭಾರತದ ಪ್ರಾದೇಶಿಕ ತೊಡಗಿಸಿಕೊಳ್ಳುವಿಕೆಯ ಕೇಂದ್ರದಲ್ಲಿದೆ ಎಂದು ಬಣ್ಣಿಸಿದ ಮೋದಿ, ಬಲವಾದ ಭಾರತ-ಉಜ್ಬೇಕಿಸ್ತಾನ್ ಪಾಲುದಾರಿಕೆಯು ಮಧ್ಯ ಏಷ್ಯಾದಲ್ಲಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಪ್ರಬಲ ಶಕ್ತಿಯಾಗಲಿದೆ ಎಂದು ಹೇಳಿದರು.

ಉಭಯ ದೇಶಗಳ ಭವಿಷ್ಯದ ಸಹಕಾರದ ಬಗ್ಗೆ ಮಾತನಾಡಿದ ಮೋದಿ, ಭಾರತ ಹಾಗೂ ಉಜ್ಬೇಕಿಸ್ತಾನ್ ತಮ್ಮ ರಕ್ಷಣಾ ಉದ್ಯಮಗಳಿಗೆ ಮಿಲಿಟರಿ ಹಾರ್ಡ್‌ವೇರ್‌ಗಳ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯನ್ನು ಪ್ರೋತ್ಸಾಹಿಸಲಿವೆ ಎಂದರು. ಮಾರುಕಟ್ಟೆ ಪ್ರವೇಶ, ಬ್ಯಾಂಕಿಂಗ್, ಪಾವತಿ ವ್ಯವಸ್ಥೆಗಳು ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಪರಿಹರಿಸಲಾಗುವುದು ಎಂದು ಅವರು ತಿಳಿಸಿದರು.

ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಸಂಪೂರ್ಣ ಪ್ರದೇಶಕ್ಕೆ ಗಂಭೀರ ಸವಾಲುಗಳನ್ನು ಒಡ್ಡಿವೆ ಎಂದು ಕಳವಳ ವ್ಯಕ್ತಪಡಿಸಿದ ಮೋದಿ, 'ಈ ಬೆದರಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿಯನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಸಂಯುಕ್ತ ಸಂಕಲ್ಪವಾಗಿದೆ ' ಎಂದರು. ದಕ್ಷಿಣ ಉಜ್ಬೇಕಿಸ್ತಾನದಲ್ಲಿರುವ ಫಯಾಜ್ ತೆಪಾ ಮತ್ತು ಕರಾ ತೆಪಾ ಬೌದ್ಧ ತಾಣಗಳ ಸಂರಕ್ಷಣೆಗಾಗಿ 'ಉದ್ದೇಶದ ಪತ್ರ'ಕ್ಕೂ ಸಹಮತಿ ವ್ಯಕ್ತವಾಯಿತು.

'ನಮ್ಮ ಕಾರ್ಯತಂತ್ರದ ಪಾಲುದಾರಿಕೆಯ 15ನೇ ವಾರ್ಷಿಕೋತ್ಸವದ ಈ ವಿಶೇಷ ಸಂದರ್ಭದಲ್ಲಿ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಮೇಲೇರಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ' ಎಂದು ಮೋದಿ ಹೇಳಿದರು.

ವ್ಯಾಪಾರ, ಹೂಡಿಕೆ, ರಕ್ಷಣೆ ಮತ್ತು ಸ್ವಚ್ಛ ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಬಂಧವನ್ನು ಬಲಗೊಳಿಸಲು ಎರಡು ದಿನಗಳ ಭೇಟಿಗಾಗಿ ಮೋದಿ ಶನಿವಾರ ತಾಷ್ಕೆಂಟ್‌ಗೆ ಆಗಮಿಸಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries