HEALTH TIPS

mAadhaar App ಮೂಲಕ Aadhaar PVC Card ಆರ್ಡರ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

 ಆಧಾರ್ ಕಾರ್ಡ್‌ನ್ನು ಸುಲಭವಾಗಿ ಕೊಂಡೊಯ್ಯಲು ಬಯಸುವವರಿಗೆ Aadhaar PVC Card ಉತ್ತಮ ಆಯ್ಕೆಯಾಗಿದೆ. ಸಾಮಾನ್ಯ ಪೇಪರ್ ಆಧಾರ್‌ಗಿಂತ ಇದು ಗಾತ್ರದಲ್ಲಿ ಚಿಕ್ಕದು, ಬಾಳಿಕೆ ಬರುವಂತಹದ್ದು ಮತ್ತು ಪರ್ಸ್‌ನಲ್ಲಿ ಸುಲಭವಾಗಿ ಇಟ್ಟುಕೊಂಡು ಹೋಗಬಹುದು. UIDAI ಪ್ರಕಾರ, PVC ಆಧಾರ್ ಕಾರ್ಡ್‌ ಕೂಡ ಇತರ ಆಧಾರ್ ರೂಪಗಳಂತೆ ಮಾನ್ಯವಾಗಿದೆ. ಇದಕ್ಕಾಗಿ ಆಧಾರ್ ಕೇಂದ್ರಕ್ಕೆ ಹೋಗುವ ಅಗತ್ಯವಿಲ್ಲ. mAadhaar ಮೊಬೈಲ್ ಆಪ್‌ ಮೂಲಕವೇ ಆನ್‌ಲೈನ್‌ನಲ್ಲಿ PVC ಕಾರ್ಡ್‌ಗಾಗಿ ಆರ್ಡರ್ ಮಾಡಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.


Aadhaar PVC Card ಎಂದರೇನು?

ಆಧಾರ್ PVC ಕಾರ್ಡ್‌ ಎಂದರೆ ನಿಮ್ಮ ಆಧಾರ್ ವಿವರಗಳನ್ನು PVC ಕಾರ್ಡ್‌ನಲ್ಲಿ ಮುದ್ರಿಸಿರುವ ಕ್ರೆಡಿಟ್ ಕಾರ್ಡ್ ಗಾತ್ರದ ಆಧಾರ್ ರೂಪ. ಇದರಲ್ಲಿ ಸುರಕ್ಷಿತ QR Code ಸೇರಿದಂತೆ ಹಲವು ಭದ್ರತಾ ಆಯ್ಕೆಗಳಿವೆ. ಇದು ಪ್ರತ್ಯೇಕ ಹೊಸ ಆಧಾರ್ ಅಲ್ಲ. ನಿಮ್ಮ ಈಗಿರುವ ಆಧಾರ್ ವಿವರಗಳನ್ನೇ PVC ಕಾರ್ಡ್ ರೂಪದಲ್ಲಿ ಪಡೆಯುತ್ತೀರಿ.

mAadhaar App ಮೂಲಕ PVC ಆಧಾರ್ ಕಾರ್ಡ್‌ ಆರ್ಡರ್ ಮಾಡುವುದು ಹೇಗೆ?

ಹಂತ 1: ಮೊಬೈಲ್‌ನಲ್ಲಿ ಅಧಿಕೃತ mAadhaar App ತೆರೆಯಿರಿ. ನಿಮ್ಮ ಆಧಾರ್ ವಿವರಗಳೊಂದಿಗೆ ಲಾಗಿನ್ ಆಗಿ.

ಹಂತ 2: ಆಧಾರ್ PVC ಕಾರ್ಡ್‌ ಸೇವೆ ಆಯ್ಕೆ ಮಾಡಿ. ಆಪ್‌ನಲ್ಲಿ ಆಧಾರ್ ಸರ್ವೀಸ್‌ ವಿಭಾಗಕ್ಕೆ ಹೋಗಿ. ಅಲ್ಲಿ ‘Order ಆಧಾರ್ PVC Card’ ಆಯ್ಕೆಯನ್ನು ಹುಡುಕಿ ಮತ್ತು ಅದರ ಮೇಲೆ ಟ್ಯಾಪ್ ಮಾಡಿ.

ಹಂತ 3: ಆಧಾರ್ ಸಂಖ್ಯೆ ನಮೂದಿಸಿ. ನಿಮ್ಮ 12 ಅಂಕಿಗಳ ಆಧಾರ್ Number ಅನ್ನು ನಮೂದಿಸಿ. ನಂತರ ಪರದೆಯ ಮೇಲೆ ಕಾಣಿಸುವ Security Code ಅನ್ನು ನಮೂದಿಸಿ.

ಹಂತ 4: OTP ಮೂಲಕ ಪರಿಶೀಲನೆ. ನಿಮ್ಮ ಆಧಾರ್‌ಗೆ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಆ OTP ಯನ್ನು ನಮೂದಿಸಿ ಮುಂದುವರಿಯಿರಿ.

ಹಂತ 5: ವಿವರಗಳನ್ನು ಪರಿಶೀಲಿಸಿ. Order ಆಧಾರ್ PVC ಕಾರ್ಡ್‌ for Self ಆಯ್ಕೆಯನ್ನು ಆರಿಸಿದ ನಂತರ, ನಿಮ್ಮ ಆಧಾರ್‌ನಲ್ಲಿರುವ ವಿವರಗಳನ್ನು ಪರಿಶೀಲಿಸಲು preview ಕಾಣಿಸುತ್ತದೆ. ಹೆಸರು, ವಿಳಾಸ ಮತ್ತು ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿ.

ಹಂತ 6: Terms and Conditions ಒಪ್ಪಿಕೊಳ್ಳಿ. ಸ್ಕ್ರೀನ್‌ ಮೇಲೆ ಕಾಣಿಸುವ Terms and Conditions ಅನ್ನು ಓದಿ, checkbox ಆಯ್ಕೆ ಮಾಡಿ. ನಂತರ Submit ಮೇಲೆ ಕ್ಲಿಕ್ ಮಾಡಿ.

ಹಂತ 7: ₹75 ಪಾವತಿ ಮಾಡಿ. ಮುಂದಿನ ಹಂತದಲ್ಲಿ Make Payment ಆಯ್ಕೆಯನ್ನು ಆರಿಸಿ. UIDAI ಪ್ರಕಾರ, Credit Card, Debit Card, Net Banking, UPI ಮತ್ತು Paytm ಸೇರಿದಂತೆ ವಿವಿಧ ಆನ್‌ಲೈನ್ ಪಾವತಿ ವಿಧಾನಗಳನ್ನು ಬಳಸಬಹುದು.

ಹಂತ 8: ರಸೀದಿ ಮತ್ತು SRN ಸೇವ್‌ ಮಾಡಿಕೊಳ್ಳಿ. ಪಾವತಿ ಯಶಸ್ವಿಯಾದ ನಂತರ ಡಿಜಿಟಲ್ ಸಹಿಯಿರುವ ರಸೀದಿ ಸಿಗುತ್ತದೆ. ಅದನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಂಡು ಸೇವ್‌ ಮಾಡಬಹುದು. ನಿಮ್ಮ ಆರ್ಡರ್‌ಗಾಗಿ 14 ಅಂಕಿಗಳ Service Request Number (SRN) ಸೃಷ್ಟಿಯಾಗುತ್ತದೆ. ಮುಂದಿನ ಹಂತಗಳಲ್ಲಿ ಆರ್ಡರ್ ಸ್ಥಿತಿಯನ್ನು ಪರಿಶೀಲಿಸಲು ಈ ಸಂಖ್ಯೆಯನ್ನು ಬಳಸಬಹುದು.






Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries