HEALTH TIPS

Pakistan | ಬಲೂಚಿಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ : ಕನಿಷ್ಠ 34 ಕಾರ್ಮಿಕರು ಮೃತ್ಯು

ಕ್ವೆಟ್ಟಾ: ಪಾಕಿಸ್ತಾನದ ನೈರುತ್ಯ ಬಲೂಚಿಸ್ತಾನ್ ಪ್ರಾಂತದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 34 ಗಣಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


ಪ್ರಾಂತದ ರಾಜಧಾನಿ ಕ್ವೆಟ್ಟಾ ಸಮೀಪದ ಸೋರಂಜ್ ಎಂಬ ಪ್ರದೇಶದಲ್ಲಿ ಗುರುವಾರ ಈ ಸ್ಫೋಟ ಸಂಭವಿಸಿದ್ದು, ಮಿಥೇನ್ ಅನಿಲ ಶೇಖರಣೆಯಾಗಿದ್ದೇ ಇದಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಸ್ಫೋಟದ ಸದ್ದು ಕೇಳಿದ ನಂತರ, ಪ್ರದೇಶದಲ್ಲಿದ್ದ ಇತರ ಗಣಿ ಕಾರ್ಮಿಕರು ರಕ್ಷಣಾ ಕಾರ್ಯಾಚರಣೆಗಾಗಿ ಗಣಿಯೊಳಗೆ ಇಳಿದರು. ಆದರೆ ಅವರು ಕೂಡ ಗಣಿಯೊಳಗೆ ಸಿಲುಕಿಕೊಂಡರು ಎಂದು ಸ್ಥಳೀಯರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

`ಇದುವರೆಗೆ 29 ಮೃತದೇಹಗಳನ್ನು ಹೊರತೆಗೆದಿದ್ದೇವೆ. ಸ್ಫೋಟದ ಸಮಯದಲ್ಲಿ ಗಣಿಯಲ್ಲಿ ಎಷ್ಟು ಜನರಿದ್ದರು ಎಂಬ ನಿಖರ ಮಾಹಿತಿಯಿಲ್ಲ' ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ಶುಕ್ರವಾರ ಬೆಳಗ್ಗೆ ತಿಳಿಸಿದ್ದಾರೆ.

ಪ್ರಾಧಿಕಾರದ ಸಿಬ್ಬಂದಿ ಮತ್ತು ಇತರ ತುರ್ತು ಸ್ಪಂದನಾ ತಂಡಗಳು ಸಿಲುಕಿಕೊಂಡಿರುವ ಉಳಿದ ಗಣಿಕಾರ್ಮಿಕರಿಗಾಗಿ ಶೋಧ ಮುಂದುವರಿಸಿದ್ದಾರೆ. ಆದರೆ, ಯಾರಾದರೂ ಬದುಕುಳಿದಿರುವ ಸಾಧ್ಯತೆ ಅತ್ಯಂತ ಕ್ಷೀಣವಾಗಿದೆ. ಈ ಪ್ರಬಲ ಸ್ಫೋಟದಿಂದಾಗಿ ಪರಸ್ಪರ ಹತ್ತಿರದಲ್ಲಿದ್ದ ಎರಡು ಗಣಿಗಳು ಹಾನಿಗೊಳಗಾಗಿವೆ ಎಂದು ಪ್ರಾಂತದ ಹಿರಿಯ ಸರಕಾರಿ ಗಣಿ ಅಧಿಕಾರಿ ಅಬ್ದುಲ್ ಘನಿ ಬಲೂಚ್ ಹೇಳಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries