ಕಾಸರಗೋಡು: ಬೈಕ್ ಡಿಕ್ಕಿಯಾಗಿ ಕಾಂಗ್ರೆಸ್ ಪಳ್ಳಿಕೆರೆ ಮಂಡಲ ಸಮಿತಿ ಕಾರ್ಯದರ್ಶಿ ಪಳ್ಳಿಕೆರೆ ತಚ್ಚಂಗಾಡ್ ನಿವಾಸಿ ಕೆ. ಧನಂಜಯನ್ ಕರುವಾಕೋಡ್ (64)ಮೃತಪಟ್ಟಿದ್ದಾರೆ.
ಸೂಪರ್ ಮಾರ್ಕೆಟ್‍ನಿಂದ ಭಾನುವಾರ ಸಂಜೆ ಸಾಮಗ್ರಿ ಖರೀದಿಸಿ ತಚ್ಚಂಗಾಡ್ ಸರ್ಕಾರಿ ಹೈಸ್ಕೂಲಿನ ಎದುರು ರಸ್ತೆ ಅಡ್ಡ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡ ಇವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಧನಂಜಯನ್ ತಚ್ಚಂಗಾಡ್ ಶಾಲೆ ಸನಿಹ ಕ್ಯಾಂಟೀನ್ ನಡೆಸಿ ಜೀವನ ಸಾಗಿಸುತ್ತಿದ್ದರು.


