HEALTH TIPS

ಗ್ರೀನ್‌ ಲ್ಯಾಂಡ್‌ ಮೇಲೆ ಶಾಶ್ವತ ನಿಯಂತ್ರಣ; ಟ್ರಂಪ್ ಘೋಷಣೆ

ವಾಷಿಂಗ್ಟನ್: ಗ್ರೀನ್‌ ಲ್ಯಾಂಡ್‌ ನ ಭದ್ರತೆ ಮತ್ತು ಅಲ್ಲಿನ ಇತರ ಅಗತ್ಯಗಳ ಕುರಿತು ಅಮೆರಿಕಕ್ಕೆ ಶಾಶ್ವತ ನಿಯಂತ್ರಣ ನೀಡುವ ಒಪ್ಪಂದ ಅಮೆರಿಕ, ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ ನಡುವೆ ಆಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. 


'ಟ್ರೂತ್ ಸೋಶಿಯಲ್'ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, 'ಗ್ರೀನ್‌ ಲ್ಯಾಂಡ್‌ ಕುರಿತ ಅಮೆರಿಕದ ಎಲ್ಲ ಕಳವಳಗಳನ್ನು ಈ ಒಪ್ಪಂದ ಸಂಪೂರ್ಣವಾಗಿ ಪರಿಹರಿಸಲಿದೆ. ಇದಕ್ಕಾಗಿ ಅಮೆರಿಕ ಯಾವುದೇ ಹಣ ಖರ್ಚು ಮಾಡಬೇಕಿಲ್ಲ' ಎಂದು ಹೇಳಿದ್ದಾರೆ.

ಗ್ರೀನ್‌ ಲ್ಯಾಂಡ್ ಮತ್ತು ಅಮೆರಿಕದ ಭದ್ರತೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ಅಮೆರಿಕಕ್ಕೆ ಶಾಶ್ವತವಾಗಿ ಇರುವಂತೆ ಮಾಡಲು, ತಮ್ಮ ನಿರ್ದೇಶನದ ಮೇರೆಗೆ ಡೆನ್ಮಾರ್ಕ್ ಮತ್ತು ಗ್ರೀನ್‌ ಲ್ಯಾಂಡ್‌ ನ ಪ್ರತಿನಿಧಿಗಳೊಂದಿಗೆ ಅಮೆರಿಕ ಕೆಲಸ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಅಮೆರಿಕದ ಅನುಮತಿ ಅಗತ್ಯ

ಇನ್ನು ಮುಂದೆ ಅಮೆರಿಕದ ಸ್ಪಷ್ಟ ಲಿಖಿತ ಅನುಮತಿಯಿಲ್ಲದೆ, ಅಮೆರಿಕದ ಯಾವುದೇ ಎದುರಾಳಿ ದೇಶ ಗ್ರೀನ್‌ ಲ್ಯಾಂಡ್‌ ನಲ್ಲಿ ಸೇನಾ ನೆಲೆ ಸ್ಥಾಪಿಸುವಂತಿಲ್ಲ. ಸೇನಾ ಉಪಸ್ಥಿತಿ ಹೊಂದಲು ಅಥವಾ ಸೂಕ್ಷ್ಮ ಹೂಡಿಕೆಗಳನ್ನು ಮಾಡಲು ಕೂಡ ಅವಕಾಶ ಇರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಕಳೆದ 100 ವರ್ಷಗಳಿಂದಲೂ ಅಮೆರಿಕದ ಅಧ್ಯಕ್ಷರಿಗೆ ಗ್ರೀನ್‌ ಲ್ಯಾಂಡ್‌ ನ ಕಾರ್ಯತಂತ್ರದ ಮಹತ್ವ ತಿಳಿದಿತ್ತು. ಆದರೆ, ಈ ವಿಷಯದಲ್ಲಿ ಯಾರಿಗೂ ಏನನ್ನೂ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

'ಗ್ರೀನ್‌ ಲ್ಯಾಂಡ್‌ ಕುರಿತ ಈ ಅತ್ಯಂತ ಪ್ರಮುಖ ಸಮಸ್ಯೆಯನ್ನು ಶಾಶ್ವತವಾಗಿ ಮತ್ತು ನಿರ್ಣಾಯಕವಾಗಿ ಬಗೆಹರಿಸಿದ ಅಧ್ಯಕ್ಷನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ' ಎಂದು ಟ್ರಂಪ್ ಹೇಳಿದ್ದಾರೆ.

ಈ ಒಪ್ಪಂದ 'ಅನಂತ ಕಾಲದ' (Infinite Life) ಒಪ್ಪಂದವಾಗಿದ್ದು, ಅದಕ್ಕೆ ಯಾವುದೇ ಅಂತ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

ಬೃಹತ್ ಸೇನಾ ಉಪಸ್ಥಿತಿ

ಗ್ರೀನ್‌ ಲ್ಯಾಂಡ್‌ ನ ಸೂಕ್ತ ಪ್ರದೇಶಗಳಲ್ಲಿ ಬೃಹತ್ ಸೇನಾ ಉಪಸ್ಥಿತಿ ಸ್ಥಾಪಿಸುವ ಕೆಲಸವನ್ನು ಅಮೆರಿಕ ತಕ್ಷಣವೇ ಆರಂಭಿಸಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಗ್ರೀನ್‌ ಲ್ಯಾಂಡ್‌ ನಲ್ಲಿ ಇದಕ್ಕೆ ಸೂಕ್ತವಾದ ಹಲವು ಪ್ರದೇಶಗಳಿವೆ ಎಂದೂ ಅವರು ಹೇಳಿದ್ದಾರೆ.

ಈ ಸೇನಾ ಉಪಸ್ಥಿತಿಗೆ ಸಂಬಂಧಿಸಿದ ಅಭಿವೃದ್ಧಿ ಮತ್ತು ನಿರ್ಮಾಣ ಕಾರ್ಯಗಳಲ್ಲಿ ಗ್ರೀನ್‌ ಲ್ಯಾಂಡ್‌ ನ ಜನರೊಂದಿಗೆ ಅಮೆರಿಕ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.

ಈ ಒಪ್ಪಂದವು ಅಮೆರಿಕ, ಡೆನ್ಮಾರ್ಕ್, ಗ್ರೀನ್‌ ಲ್ಯಾಂಡ್ ಮತ್ತು ಅಮೆರಿಕದ ಎಲ್ಲ ಮಿತ್ರರಾಷ್ಟ್ರಗಳಿಗೆ ಅತ್ಯುತ್ತಮ ಪರಿಹಾರವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

'ಐತಿಹಾಸಿಕ ಬೆಳವಣಿಗೆ'

ಗ್ರೀನ್‌ ಲ್ಯಾಂಡ್‌ ಕುರಿತ ಈ ಬೆಳವಣಿಗೆಗೆ ಅಪಾರ ಗೌರವ ಮತ್ತು ಹೆಮ್ಮೆ ಇದೆ ಎಂದು ಟ್ರಂಪ್ ಹೇಳಿದ್ದಾರೆ. ಒಪ್ಪಂದದಲ್ಲಿ ಈಗ ಆಗಿರುವ ಎಲ್ಲವನ್ನೂ ಅಮೆರಿಕದ ಜನರು ಗೌರವಿಸುತ್ತಾರೆ ಮತ್ತು ಸ್ಮರಿಸುತ್ತಾರೆ ಎಂದಿದ್ದಾರೆ.

'ವಿಶಾಲವಾದ ಮತ್ತು ಅತ್ಯಂತ ಕಾರ್ಯತಂತ್ರದ ಮಹತ್ವ ಹೊಂದಿರುವ ಈ ಭೂಪ್ರದೇಶದ ಕುರಿತು ಭವ್ಯವಾದ ಭವಿಷ್ಯದತ್ತ ಸಾಗಲು ಡೆನ್ಮಾರ್ಕ್ ಮತ್ತು ಗ್ರೀನ್‌ ಲ್ಯಾಂಡ್‌ ನ ಜನರೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ. ನಾವು ಗ್ರೀನ್‌ ಲ್ಯಾಂಡ್‌ ಅನ್ನು ಅತ್ಯಂತ ಜಾಗರೂಕತೆಯಿಂದ ರಕ್ಷಿಸುತ್ತೇವೆ' ಎಂದು ಅವರು ಹೇಳಿದ್ದಾರೆ.

ಗ್ರೀನ್‌ ಲ್ಯಾಂಡ್‌ ಕುರಿತ ಒಪ್ಪಂದ ಅಮೆರಿಕಕ್ಕೆ 'ನನಸಾದ ಕನಸು' ಇದ್ದಂತೆ. ಇದು ಅತ್ಯಂತ ಪ್ರಮುಖವಾದ, ಐತಿಹಾಸಿಕ ಮತ್ತು ವಿಶೇಷವಾದ ವಿಷಯ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.


US President Donald Trump, on Truth Social, posts, "BREAKING NEWS: I am pleased to announce that the United States of America has entered into an Agreement with The Kingdom of Denmark, and Greenland, that gives the United States permanent control over security, and all other Show more

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries