HEALTH TIPS

ಪಿಸಿಬಿ ಆಯ್ಕೆ ಸಮಿತಿಯ ಸದಸ್ಯ ಸ್ಥಾನಕ್ಕೆ ಮಿಸ್ಬಾವುಲ್ ಹಕ್ ರಾಜೀನಾಮೆ

ನವದೆಹಲಿ: ಪಾಕಿಸ್ತಾನ ತಂಡದ ಮಾಜಿ ನಾಯಕ ಮಿಸ್ಬಾವುಲ್ ಹಕ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ)ನಾಲ್ವರು ಸದಸ್ಯರ ರಾಷ್ಟ್ರೀಯ ಆಯ್ಕೆ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದಾರೆ.


ಮಾಜಿ ಕ್ರಿಕೆಟಿಗ ಹಕ್ ಪಿಸಿಬಿಗೆ ತನ್ನ ನಿರ್ಧಾರದ ಕುರಿತು ಮಾಹಿತಿ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ವರದಿ ಮಾಡಿದೆ. ಕ್ರಿಕ್‌ಇನ್‌ಫೋ ವರದಿ ಪ್ರಕಾರ, ಪಿಸಿಬಿ ಇನ್ನೂ ಮಿಸ್ಬಾವುಲ್ ಹಕ್‌ರ ರಾಜೀನಾಮೆಯನ್ನು ಸ್ವೀಕರಿಸಿಲ್ಲ.

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಪಾಕಿಸ್ತಾನ ಟೆಸ್ಟ್ ತಂಡವು 194 ರನ್‌ಗಳಿಂದ ಹೀನಾಯವಾಗಿ ಸೋತ ನಂತರ ಪಾಕಿಸ್ತಾನದ ಟೆಸ್ಟ್ ತಂಡ ಹಾಗೂ ಕೋಚಿಂಗ್ ಸಿಬ್ಬಂದಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡುವುದಾಗಿ ಪಿಸಿಬಿ ಪ್ರಕಟಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ಮಿಸ್ಬಾ ರಾಷ್ಟ್ರೀಯ ಆಯ್ಕೆ ಸಮಿತಿಯ ಭಾಗವಾಗಿದ್ದರೂ ತಂಡ ಹಾಗೂ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಪಿಸಿಬಿ ನಿರ್ಧರಿಸಿದಾಗ ಅವರೊಂದಿಗೆ ಸಮಾಲೋಚಿಸಿಲ್ಲ ಎನ್ನಲಾಗಿದೆ.

ಈ ಹಿಂದೆ ಮುಖ್ಯ ಕೋಚ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಮಿಸ್ಬಾವುಲ್ ಹಕ್ ಮಾರ್ಚ್‌ನಲ್ಲಿ ಆಕಿಬ್ ಜಾವೇದ್, ಸರ್ಫರಾಝ್ ಅಹ್ಮದ್ ಹಾಗೂ ಅಸದ್ ಶಫೀಕ್ ಅವರಿದ್ದ ನಾಲ್ವರು ಸದಸ್ಯರ ರಾಷ್ಟ್ರೀಯ ಆಯ್ಕೆ ಸಮಿತಿಗೆ ನೇಮಕಗೊಂಡಿದ್ದರು.

ಇಂಗ್ಲೆಂಡ್ ವಿರುದ್ಧ ಎಜ್‌ಬಾಸ್ಟನ್‌ನಲ್ಲಿ ಸೆ.9ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಟೆಸ್ಟ್ ತಂಡದಿಂದ ಏಳು ಆಟಗಾರರನ್ನು ಪಿಸಿಬಿ ಬಿಡುಗಡೆ ಮಾಡಿದೆ. ಮುಹಮ್ಮದ್ ರಿಝ್ವಾನ್, ಇಮಾಮುಲ್‌ಹಕ್, ಸಲ್ಮಾನ್ ಅಲಿ, ಅಲಿ ಉಸ್ಮಾನ್, ಆಮಿರ್ ಅಜ್ಮಲ್, ಅವೈಸ್ ಝಾಫರ್ ಹಾಗೂ ಖುರ‌್ರಂ ಶಾಝಾದ್‌ರನ್ನು ಬಿಡುಗಡೆ ಮಾಡಲಾಗಿದೆ.

ಸರ್ಫರಾಝ್ ಅಹ್ಮದ್ ಹಾಗೂ ಉಮರ್ ಗುಲ್‌ರನ್ನು ಕ್ರಮವಾಗಿ ಮುಖ್ಯ ಕೋಚ್ ಹಾಗೂ ಬೌಲಿಂಗ್ ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಇಂಗ್ಲೆಂಡ್ ಪ್ರವಾಸದ ಉಳಿದ ಪಂದ್ಯಗಳಿಗೆ ಸೀಮಿತ ಓವರ್ ತಂಡದ ಮುಖ್ಯ ಕೋಚ್ ಮೈಕ್ ಹೆಸ್ಸನ್ ಹಾಗೂ ಬೌಲಿಂಗ್ ಕೋಚ್ ಅಶ್ಲೆ ನೊಫ್ಕೆಗೆ ಟೆಸ್ಟ್ ತಂಡದ ಕೆಲಸ ವಹಿಸಿಕೊಡಲಾಗಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries