HEALTH TIPS

ರಾಜ್ಯ ಅಥ್ಲೆಟಿಕ್ ಮೀಟ್‍ನಲ್ಲಿ ನಾಲ್ಕು ಚಿನ್ನ, ಒಂದು ಬೆಳ್ಳಿ ಪದಕಗಳೊಂದಿಗೆ ಜಿಲ್ಲೆಗೆ ಅಭಿಮಾನವಾದ ಕಾಸರಗೋಡಿನ ಕ್ರೀಡಾ ಪ್ರತಿಭೆ ಪಿ. ಆಯಿಷತ್ ತಾಹಿರಾ

ಪೆರ್ಲ: ಕೊಚ್ಚಿಯಲ್ಲಿ ನಡೆದ ಮಲಯಾಳಿ ಮಾಸ್ಟರ್ಸ್ ರಾಜ್ಯ ಅಥ್ಲೆಟಿಕ್ ಮೀಟ್‍ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಾಸರಗೋಡಿನ ಪಿ. ಆಯಿಷತ್ ತಾಹಿರಾ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತಂದಿದ್ದಾರೆ.


30 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ ಆಯಿಷತ್ ತಾಹಿರಾ, 200 ಮೀಟರ್ ಓಟವನ್ನು 31.40 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದಲ್ಲದೆ 400 ಮೀಟರ್ ಓಟ, ್ಠ4100 ಮೀಟರ್ ರಿಲೇ ಹಾಗೂ ್ಠ4400 ಮೀಟರ್ ರಿಲೇ ಸ್ಪರ್ಧೆಗಳಲ್ಲೂ ಚಿನ್ನದ ಪದಕ ಗೆದ್ದು ತಮ್ಮ ವೇಗ ಮತ್ತು ಸಾಮಥ್ರ್ಯವನ್ನು ಸಾಬೀತುಪಡಿಸಿದರು.

100 ಮೀಟರ್ ಓಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಅವರು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಒಟ್ಟಾರೆ ನಾಲ್ಕು ಚಿನ್ನ ಹಾಗೂ ಒಂದು ಬೆಳ್ಳಿ ಪದಕಗಳೊಂದಿಗೆ ಕೂಟದಲ್ಲಿ ಗಮನಾರ್ಹ ಸಾಧನೆ ಮಾಡಿದರು.

ವಿಶೇಷವೆಂದರೆ, ಯಾವುದೇ ಅತ್ಯಾಧುನಿಕ ಅಥವಾ ನಿರಂತರ ತರಬೇತಿ ಸೌಲಭ್ಯಗಳ ನೆರವಿಲ್ಲದೆಯೇ ಆಯಿಷತ್ ತಾಹಿರಾ ಈ ಗಮನಾರ್ಹ ಸಾಧನೆ ಮಾಡಿರುವುದು ಅವರ ಕ್ರೀಡಾ ಪ್ರತಿಭೆ ಮತ್ತು ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಎಣ್ಮಕಜೆ ಪಂಚಾಯತಿಯ ಮಣಿಯಂಪಾರೆ ಸಮೀಪದ ಪೆರ್ದನೆ ನಿವಾಸಿ ಹಾಗೂ ಮಾಜಿ ರಾಜ್ಯ ಕಬಡ್ಡಿ ಆಟಗಾರ ರಸಾಕ್ - ಮೈಮೂನ  ದಂಪತಿಗಳ ಪುತ್ರಿಯಾಗಿರುವ ಆಯಿಷತ್ ತಾಹಿರಾ, ಬೋವಿಕ್ಕಾನ, ಆಲೂರಿನ ಜಂಶೀದ್ ಅವರ ಪತ್ನಿಯಾಗಿದ್ದಾರೆ.

ಕಬಡ್ಡಿ ಕ್ರೀಡಾಪಟುವಿನ ಪುತ್ರಿಯಾಗಿ ಬೆಳೆದ ಆಯಿಷತ್ ತಾಹಿರಾ ಶೇಣಿ ಶ್ರೀಶಾರದಾಂಬ ಶಾಲಾ ಹಳೆ ವಿದ್ಯಾರ್ಥಿಯಾಗಿದ್ದಾರೆ. ಶಾಲಾ ಕ್ರೀಡಾ ಕೂಟದಲ್ಲೂ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು.  ಇದೀಗ ಅಥ್ಲೆಟಿಕ್ಸ್‍ನಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚಿರುವುದು ಕಾಸರಗೋಡು ಜಿಲ್ಲೆಯ ಕ್ರೀಡಾ ವಲಯದಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಸೀಮಿತ ತರಬೇತಿಯ ನಡುವೆಯೂ ರಾಜ್ಯಮಟ್ಟದಲ್ಲಿ ಐದು ಪದಕಗಳನ್ನು ಗೆದ್ದಿರುವ ಅವರ ಸಾಧನೆ, ಸೂಕ್ತ ತರಬೇತಿ ಮತ್ತು ಬೆಂಬಲ ದೊರೆತರೆ ಇನ್ನಷ್ಟು ಎತ್ತರಕ್ಕೆ ಏರಬಲ್ಲ ಸಾಮಥ್ರ್ಯ ಅವರಲ್ಲಿದೆ ಎಂಬುದನ್ನು ತೋರಿಸಿದೆ.ಜನವರಿ 5 ರಂದು ಕೊಯಂಬುತ್ತೂರಿನಲ್ಲಿ ದೇಶಿಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries