HEALTH TIPS

ನೆತನ್ಯಾಹು ಅಮೆರಿಕವನ್ನು ದಾರಿ ತಪ್ಪಿಸಿದ್ದಾರೆ: ಇರಾನ್ ವಿದೇಶಾಂಗ ಸಚಿವರ ಆರೋಪ

ಟೆಹರಾನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು `ಸರ್ಪ' ಎಂದು ಕರೆದಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಇರಾನ್ ವಿರುದ್ಧ ಯುದ್ಧಕ್ಕೆ ಇಳಿಯುವಂತೆ ಅಮೆರಿಕವನ್ನು ನೆತನ್ಯಾಹು ದಾರಿ ತಪ್ಪಿಸಿದ್ದಾರೆ ಎಂದು ಸೋಮವಾರ ಆರೋಪಿಸಿದ್ದಾರೆ.


`ಇರಾನ್ ವಿರುದ್ಧದ ಯುದ್ಧಕ್ಕೆ ಇಸ್ರೇಲ್ ಪರವಾಗಿ ಅಮೆರಿಕ ಆಡಳಿತವನ್ನು ಹೇಗೆ ತಳ್ಳಿದೆ ಎಂಬುದನ್ನು ಹಿಬ್ರೂ ಭಾಷೆಯಲ್ಲಿ ನೆತನ್ಯಾಹು ಬಹಿರಂಗವಾಗಿ ಕೊಚ್ಚಿಕೊಳ್ಳುತ್ತಾರೆ. ಅಮೆರಿಕವನ್ನು ತಾವು ಹೇಗೆ `ಪ್ರಭಾವಿಸಿದೆವು' ಎಂದು ಬಣ್ಣಿಸುತ್ತಾ ನಗುತ್ತಾರೆ. ಇಂಗ್ಲಿಷ್‍ನಲ್ಲಿ, ಅವರು ಅಮೆರಿಕ ಅಧ್ಯಕ್ಷರ ನಾಯಕತ್ವವನ್ನು ಹೊಗಳುತ್ತಾರೆ. ಅವರೊಂದು ಸರ್ಪ' ಎಂದು ಅರಾಘ್ಚಿ `ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ವಾರ, ನೆತನ್ಯಾಹು ಇರಾನ್-ಅಮೆರಿಕ ಒಪ್ಪಂದದ ಯಾವುದೇ ಸಾಧ್ಯತೆಯನ್ನು ತಿರಸ್ಕರಿಸಿದ್ದರು ಮತ್ತು ಇರಾನ್ ನಾಯಕರನ್ನು `ಕಾಡುಜನರು' ಎಂದು ಕರೆದಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries